– 5 ವರ್ಷದ ಬಂಧನದ ವಿರಸಕ್ಕೆ ಕಾರಣ ಏನು ಗೊತ್ತೆ..?
ಚಂಡೀಗಢ: ಪ್ರೀತಿಗೆ ಕಣ್ಣಿಲ್ಲ, ಮಾಯೆ ಎಂದು ಕರೆಯುತ್ತಾರೆ. ಕೆಲವೊಮ್ಮೆ ಮೊದಲ ನೋಟದಲ್ಲಿಯೇ ಮನಸೆಳೆದಾಗ ಇಬ್ಬರು ಒಬ್ಬರನೊಬ್ಬರು ಪ್ರೀತಿಸಿ ಮದುವೆ ಆಗುವುದುಂಟು. ಮತ್ತೆ ಬಾಲ್ಯದಲ್ಲಿ ಚಿಗುರಿದ ಪ್ರೀತಿ ಯೌವನದಲ್ಲಿ ಅರಳಿರುವ ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬ ಮಹಿಳೆ ಯುವತಿಯನ್ನ ನೋಡಿ ಆಕರ್ಷಿತಳಾಗಿ, ಆಕೆಗಾಗಿ ತನ್ನ ಲಿಂಗಪರಿವರ್ತನೆ ಮಾಡಿಸಿಕೊಂಡು ಮದುವೆ ಕೂಡ ಆಗಿದ್ದಳು. ಅದೇ ಯುವತಿ ತನಗಾಗಿ ಲಿಂಗ ಬದಲಾಯಿಸಿಕೊಂಡವನು ನನಗೆ ಬೇಡ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಇಂತಹ ವಿಚಿತ್ರ ಪ್ರಕರಣವೊಂದು ಹರಿಯಾಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. 5 ವರ್ಷಗಳ ಹಿಂದೆ ಶಿಕ್ಷಕಿಯಾಗಿದ್ದ ಶರ್ಮಿಳಾ (ಹೆಸರು ಬದಲಾಯಿಸಲಾಗಿದೆ) ಶಾಲೆಯ ಕಾರ್ಯಕ್ರಮದಲ್ಲಿ ಯಾಮಿನಿ (ಹೆಸರು ಬದಲಿಸಲಾಗಿದೆ) ಎಂಬ ಯುವತಿಯನ್ನು ನೋಡಿದ್ದರು. ಮೊದಲ ನೋಟದಲ್ಲಿ ಇಬ್ಬರಿಗೂ ಲವ್ ಆಗಿದೆ. ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಶರ್ಮಿಳಾ ಸುಮಾರು 10 ಲಕ್ಷ ರೂ. ಖರ್ಚು ಮಾಡಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಶರ್ಮಾನ್ ಆಗಿ ಬದಲಾಗಿದ್ದರು.
Advertisement
Advertisement
Advertisement
ಲಿಂಗ ಪರಿವರ್ತನೆ ಬಳಿಕ ಇಬ್ಬರು ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಮುಂದೆ ತಮಗೆ ಮಕ್ಕಳು ಆಗುವುದಿಲ್ಲ ಅಂತಾ ತಿಳಿದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಸದ್ಯ ಯಾಮಿನಿ ಗಂಡನಿಂದ ನನಗೆ ವಿಚ್ಛೇಧನ ನೀಡಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
Advertisement
ವಿರಸಕ್ಕೆ ಕಾರಣವೇನು..?
ಕುಟುಂಬಸ್ಥರ ವಿರೋಧದ ನಡುವೆಯೂ ಮದುವೆಯಾದ ಶರ್ಮಿಳಾ ಮತ್ತು ಯಾಮಿನಿ ಐದು ವರ್ಷ ಜೊತೆಯಾಗಿದ್ದರು. ಮದುವೆ ಎರಡು ವರ್ಷದ ನಂತರ ಶರ್ಮಾನ್ (ಪತಿ) ನನಗೆ ಮಾನಸಿಕವಾಗಿ ಕಿರುಕುಳ ನೀಡಲು ಆರಂಭಿಸಿದನು. ಕೆಲವು ದಿನಗಳಿಂದ ದೈಹಿಕವಾಗಿಯೂ ಹಿಂಸೆ ಕೊಡುತ್ತಿದ್ದಾನೆ. ಮದುವೆ ನಂತರವೂ ನನ್ನ ಸಂಪೂರ್ಣ ಖರ್ಚು ವೆಚ್ಚವನ್ನ ನಾನೇ ಭರಿಸಿಕೊಳ್ಳುತ್ತಿದ್ದೇನೆ. ಪ್ರತಿದಿನ ಸಣ್ಣಪುಟ್ಟ ವಿಚಾರಕ್ಕೆ ಜಗಳ ತಗೆದು ಹಲ್ಲೆ ನಡೆಸುತ್ತಿದ್ದಾನೆ. ಹಾಗಾಗಿ ಆತನಿಂದ ನನಗೆ ಬಿಡುಗಡೆ ಕೊಡಿಸಬೇಕೆಂದು ಯಾಮಿನಿ ಕೇಳುತ್ತಿದ್ದಾರೆ.
ಇತ್ತ ಮದುವೆ ಬಳಿಕ ದತ್ತು ಪಡೆದ ಎರಡೂವರೆ ವರ್ಷದ ಹೆಣ್ಣು ಮಗುವನ್ನು ತಮ್ಮ ಬಳಿಯೇ ಇರಿಸಿಕೊಳ್ಳಲು ಯಾಮಿನಿ ನಿರ್ಧರಿಸಿದ್ದಾರೆ. ಪತಿಯಿಂದ ತಮಗೆ ಯಾವುದೇ ಪರಿಹಾರದ ಹಣ ಬೇಡ. ಆತನಿಂದ ತನಗೆ ಮುಕ್ತಿ ಕೊಡಿಸಿದರೆ ಸಾಕು ಎಂದು ಯಾಮಿನಿ ಅಳುಲು ತೋಡಿಕೊಂಡಿದ್ದಾರೆ.
ಈ ಸಂಬಂಧ ದಂಪತಿಯನ್ನು ಕೌನ್ಸಿಲಿಂಗ್ ಗಾಗಿ ಆಹ್ವಾನಿಸಿದ್ದೇವೆ. ಯಾಮಿನಿ ಮತ್ತು ಶರ್ಮಾನ್ ಇಬ್ಬರ ಅನಿಸಿಕೆಯನ್ನು ಪಡೆದುಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಿಳಾ ಸಂರಕ್ಷಣೆ ಮತ್ತು ಬಾಲ್ಯ ವಿವಾಹ ನಿಷೇಧ ಇಲಾಖೆ ಸಹಾಯಕ ಅಧಿಕಾರಿ ರಾಮ್ ಲೋಹನ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv