ಕೋಟಿ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ ಮಂಗಳಮುಖಿಯ ಬರ್ಬರ ಹತ್ಯೆ – ಪತಿ, ಮನೆಗೆಲಸದಾಕೆ ಪರಾರಿ

Public TV
1 Min Read
Mangalamuki Murder

ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಟ್ರಾನ್ಸ್‌ಜೆಂಡರ್ ತನುಶ್ರೀ

ಬೆಂಗಳೂರು: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಮಂಗಳಮುಖಿಯನ್ನು (Transgender) ಭೀಕರವಾಗಿ ಹತ್ಯೆಗೈದಿರುವುದು ಕೆ.ಆರ್.ಪುರಂನ (KR Puram) ಗಾಯಿತ್ರಿ ಲೇಔಟ್‍ನಲ್ಲಿ ನಡೆದಿದೆ.

ಕೊಲೆಯಾದ ಮಂಗಳಮುಖಿಯನ್ನು ತನುಶ್ರೀ (40) ಎಂದು ಗುರುತಿಸಲಾಗಿದೆ. ಆಕೆ ಕಳೆದ ಮೂರು ತಿಂಗಳ ಹಿಂದಷ್ಟೇ ಜಗನ್ನಾಥ್ ಎಂಬಾತನನ್ನು ಮದುವೆಯಾಗಿದ್ದಳು. ಅಲ್ಲದೇ ಆಕೆಯ ಹೆಸರಿನಲ್ಲಿ ಕೋಟಿ ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಜಸ್ಥಾನ | ಅಪ್ರಾಪ್ತನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ – ಮಹಿಳೆಗೆ 20 ವರ್ಷ ಜೈಲು

ಮೂರು ದಿನಗಳ ಹಿಂದೆ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಹತ್ಯೆಯ ಬಳಿಕ ಪತಿ ಜಗನ್ನಾಥ್ ಹಾಗೂ ಮನೆಗೆಲಸದಾಕೆ ಮನೆಯಿಂದ ಪರಾರಿಯಾಗಿದ್ದಾರೆ.

ಮಂಗಳಮುಖಿ ತನುಶ್ರೀ ಎನ್‌ಜಿಓ ಒಂದನ್ನು ನಡೆಸುತ್ತಿದ್ದರು. ಅಲ್ಲದೇ ಕನ್ನಡ ಪರ ಸಂಘಟನೆಯೊಂದರ ಕಾರ್ಯಕರ್ತೆಯಾಗಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕೆ.ಆರ್.ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಭಾರೀ ಗಾಳಿ ಮಳೆ – ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾರಿಗೆ ನೌಕರ ದುರ್ಮರಣ

Share This Article