ಲಂಡನ್: ನಕಲಿ ಶಿಶ್ನ ಬಳಸಿ ಇಬ್ಬರು ಮಹಿಳೆಯರು ಹಾಗೂ ಹದಿಹರೆಯದ ಬಾಲಕಿಯನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸಿದ ಹಾಗೂ ಲೈಂಗಿಕ ಸಂಪರ್ಕ ನಡೆಸಿದ ತೃತೀಯಲಿಂಗಿಗೆ ಲಂಡನ್‌ನಲ್ಲಿರುವ ಸ್ನಾರೆಸ್ ಬ್ರೂಕ್ ಕ್ರೌನ್ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹನ್ನಾ ವಾಲ್ಟರ್ಸ್ ಎಂಬ ವ್ಯಕ್ತಿ ಹೆಣ್ಣಾಗಿ ಹುಟ್ಟಿ ತಾನು ತರ್ಜಿತ್ ಸಿಂಗ್ (32) ಪುರುಷ ಎಂದು ಗುರುತಿಸಿಕೊಂಡಿದ್ದ. ಈತ ಸಂಭೋಗದ ಸಮಯದಲ್ಲಿ ಬಟ್ಟೆ ಧರಿಸುತ್ತಿದ್ದ. ಕತ್ತಲಿನ ಸಮಯದಲ್ಲಿ ನಕಲಿ ಶಿಶ್ನ ಬಳಸಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ವಿಚಾರಣೆಯ ನಂತರ ತರ್ಜಿತ್ ಸಿಂಗ್‌ಗೆ ದೈಹಿಕ ಹಾನಿ ಮತ್ತು ಕೊಲೆ ಬೆದರಿಕೆ ಆರೋಪದ ಮೇಲೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ದಕ್ಷಿಣಕನ್ನಡದಲ್ಲಿ ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಅಂಗಡಿ ಮುಂಗಟ್ಟು ಬಂದ್- ನಾಳೆ ಶಾಂತಿ ಸಭೆ
Advertisement
Advertisement
ಭವಿಷ್ಯದಲ್ಲಿ ಸಿಂಗ್‌ನಿಂದ ಸಾರ್ವಜನಿಕರಿಗೆ ಗಂಭೀರವಾಗಿ ಹಾನಿಯಾಗುವ ಅಪಾಯವಿದೆ. ಮೂವರು ಸಂತ್ರಸ್ತೆಯರ ವಿರುದ್ಧ ಪದೇ-ಪದೇ ಹಿಂಸಾಚಾರ ಮತ್ತು ಹಲ್ಲೆ ಮಾಡಿದ್ದಾನೆ. ಈತ ಅಪಾಯಕಾರಿ ಅಪರಾಧಿ ಹಾಗೂ ಸುಳ್ಳುಗಾರ. ಪ್ರಾಮಾಣಿಕವಾಗಿ ಸಂಭಾಷಣೆ ನಡೆಸುವ ಬದಲು ಮೋಸದ ಮಾರ್ಗ ಆಯ್ಕೆ ಮಾಡಿಕೊಂಡಿದ್ದಾನೆ ಹಾಗಾಗಿ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧೀಶ ಆಸ್ಕರ್ ಡೆಲ್ ಫ್ಯಾಬ್ರೊ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
Advertisement
Advertisement
ಈ ಕುರಿತು ಅಳಲು ತೋಡಿಕೊಂಡ ಸಂತ್ರಸ್ತೆ, “ಈ ಘಟನೆ ನನ್ನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ನಾನು ತೀವ್ರ ಆತಂಕ ಮತ್ತು ಖಿನ್ನತೆಗೊಳಗಾಗಿದ್ದಾನೆ. ನಾನು ಇದರಿಂದ ಹೊರಬರಲು ಖಿನ್ನತೆಯ ಔಷಧಿ ತೆಗೆದುಕೊಳ್ಳಬೇಕಾಯಿತು” ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಸ್ಕಾಂನಿಂದ ಗ್ರಾಹಕ ಸ್ನೇಹಿ ಡಿಜಿಟಲ್ ಮೀಟರ್ ಅಳವಡಿಕೆ
ಮತ್ತೊಬ್ಬರು ಸಂತ್ರಸ್ತೆ ತನ್ನ ದೂರಿನಲ್ಲಿ, “ಆ ಸಮಯದಲ್ಲಿ ನನಗೆ ಕೇವಲ 16 ವರ್ಷ ವಯಸ್ಸಾಗಿತ್ತು. ನನ್ನ ಜೀವನದ ಅತ್ಯಂತ ದುರ್ಬಲ ಪರಿಸ್ಥಿತಿ ಎದುರಿಸಬೇಕಾಯಿತು. ಆರೋಪಿ ಕುತಂತ್ರದಾಟಕ್ಕೆ ನನ್ನನ್ನು ಬಳಸಿಕೊಂಡ” ಎಂದು ಆರೋಪಿಸಿದ್ದಾರೆ.
ಈ ಘಟನೆಯಿಂದ ನನ್ನ ಜೀವನದ ಅಮೂಲ್ಯ ಸಮಯವನ್ನು ನಾನು ಕಳೆದುಕೊಂಡಿದ್ದೇನೆ. ಅಧ್ಯಯನ ಮತ್ತು ಕಾಲೇಜು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ದೀರ್ಘಕಾಲದವರೆಗೆ ನಾನು ಮನೆಯಿಂದ ಹೊರ ಹೋಗಲು ಹೆದರುತ್ತಿದ್ದೆ ಎಂದು 3ನೇ ಸಂತ್ರಸ್ತೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು.