ಬೆಂಗಳೂರು: ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(PFI) ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ(NIA), ಜಾರಿ ನಿರ್ದೇಶನಾಲಯ(ED) ಮತ್ತು ಬೆಂಗಳೂರು ಪೊಲೀಸರು(Bengaluru Police) ಬಂಧಿತ ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಈ ಮಧ್ಯೆ ಬೆಂಗಳೂರು ಪೊಲೀಸರು ಬಂಧಿಸಿರುವ ಹದಿನೈದು ಶಂಕಿತರ ಬಳಿ ಟ್ರೈನಿಂಗ್ ಟು ಬಿ ಅರ್ಗನೈಸ್ಡ್ (Training To Be Organised) ಎಂಬ ಒನ್ ಲೈನ್ ಲೆಟರ್ ಸಿಕ್ಕಿದ್ದು ತನಿಖೆ ಚುರುಕಾಗುತ್ತಿದೆ. ಇದನ್ನೂ ಓದಿ: ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್: ಆರೋಪಿಗಳ ಕೆಲಸ ಏನು?
Advertisement
Advertisement
ಯಾವ ತರಬೇತಿ? ಏತಕ್ಕಾಗಿ ಎಂಬೆಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೊತೆಗೆ ದೆಹಲಿಯಲ್ಲಿ ಮಂಗಳೂರು ಮೂಲದ ಮಹಮ್ಮದ್ ಆಶ್ರಫ್‍ನನ್ನು ಪೊಲೀಸರು ಬಂಧಿಸಿದ್ದರು. ಈತ ಸಂಘಟನೆಯೊಂದರ ರಾಷ್ಟ್ರೀಯ ಕಾರ್ಯದರ್ಶಿ ಎನ್ನಲಾಗಿದ್ದು, ಕರ್ನಾಟಕ, ಜಾರ್ಖಂಡ್, ಒಡಿಶಾ ರಾಜ್ಯಗಳ ಇನ್‍ಚಾರ್ಜ್ ಆಗಿದ್ದ ಎನ್ನುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
Advertisement
ಶಂಕಿತರ ಬಳಿ ಪತ್ತೆಯಾಗಿರುವ `ಟ್ರೈನಿಂಗ್ ಟು ಬಿ ಅರ್ಗನೈಸ್ಡ್` ಪತ್ರಕ್ಕೂ ಮೊಹಮ್ಮದ್ ಆಶ್ರಫ್‍ಗೂ ಲಿಂಕ್ ಇರೋ ಬಗ್ಗೆ ಬೆಂಗಳೂರು ಪೊಲೀಸರಿಗೆ ಬಲವಾದ ಅನುಮಾನ ಮೂಡಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.