Bengaluru CityLatestLeading NewsMain Post

ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್‌: ಆರೋಪಿಗಳ ಕೆಲಸ ಏನು?

ಬೆಂಗಳೂರು: ಭರ್ಜರಿ ತಯಾರಿ ನಡೆಸಿದ ಬಳಿಕ ಪಿಎಫ್‌ಐ(PFI) ಮುಖಂಡರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಿ ಕರ್ನಾಟಕದಲ್ಲಿ(Karnataka) 7 ಮಂದಿಯನ್ನು ಬಂಧಿಸಿದ್ದಾರೆ.

ಪಿಎಫ್​ಐನ ಪ್ರತಿ ಮುಖಂಡ, ಕಾರ್ಯಕರ್ತರು, ಪ್ರಮುಖರ ಮಾಹಿತಿ ಕಲೆ ಹಾಕಲಾಗಿತ್ತು. ಯಾವ ಸಮಯದಲ್ಲಿ ಮನೆಯಲ್ಲಿ ಇರುತ್ತಾರೆ, ಹೊರಗಡೆ ಹೋಗುತ್ತಾರೆ ಎಂಬುದನ್ನು ಮೊದಲೇ ತಿಳಿದುಕೊಳ್ಳಲಾಗಿತ್ತು.

ಎನ್‌ಐಎ ದಾಳಿ ಮೊದಲೇ ನಡೆಯಬೇಕಿತ್ತು. ಆದರೆ ಕೇರಳದಲ್ಲಿ ಪಿಎಫ್‌ಐ ದೊಡ್ಡ ಮಟ್ಟದ ಕಾರ್ಯಕ್ರಮ, ಸಭೆ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ನಾಯಕರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ತಡವಾಗಿ ದಾಳಿ ನಡೆಸಲಾಗಿದೆ.

ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿ ಶಂಕಿತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ನಗದಿನ ಮೂಲ, ಧರ್ಮ ಸಂಬಂಧ ಪುಸ್ತಕಗಳು, ಪೆನ್ ಡ್ರೈವ್ , ಲ್ಯಾಪ್ ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನಗಳ ಒಳಗಡೆ ಏನಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

ಬಂಧನಕ್ಕೆ ಒಳಗಾದ 7 ಮಂದಿ ಯಾರು?
1 ಅನೀಸ್ ಅಹಮದ್
ಬೆಂಗಳೂರು ಮೂಲದವನಾದ ಅನೀಸ್​ ಅಹ್ಮದ್​ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದು ಪಿಎಫ್​ಐ ರಾಜ್ಯಮಟ್ಟದ ನಾಯಕನಾಗಿದ್ದ. ಈತ ಕಳೆದ 10 ದಿನಗಳಿಂದ ಮಲಬಾರ್ ಕಾನ್ಫರೆನ್ಸ್ ಹೆಸರಿನ​ ಸಭೆಯಲ್ಲಿ ಭಾಗವಹಿಸಿದ್ದ.

2 ಅಫ್ಸರ್ ಪಾಷಾ
ರಾಜ್ಯಮಟ್ಟದ ನಾಯಕನಾಗಿರುವ ಈತನ ಮೇಲೆ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ ಪಾದರಾಯನಪುರದ ಟೆಲಿಕಾಂ ಲೇಔಟ್​ನ ಬಾಡಿಗೆ ಮನೆಗೆ ತೆರಳಿದ್ದ. ಪ್ರಸ್ತುತ ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದ.

3 ಅಬ್ದುಲ್ ವಹೀದ್​
ತಮಿಳುನಾಡು ಮೂಲದ ಈತ ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿದ್ದ. ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿದ್ದಾನೆ.

4 ಯಾಸಿರ್ ಹಸನ್​​
ಮೂಲತಃ ಮಂಗಳೂರಿನವನಾದ ಯಾಸಿರ್​ ಅರಾಫತ್​ ಬೆಂಗಳೂರಲ್ಲಿ ಪಿಎಫ್‌ಐ ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದ. ಕಾವಲಬೈರಸಂದ್ರದಲ್ಲಿ ಮನೆ ಮಾಡಿಕೊಂಡಿದ್ದ ಈತನಿಂದಲೇ ಬಹುತೇಕ ಪಿಎಫ್‌ಐ ಕಚೇರಿ ಕೆಲಸಗಳ ನಿರ್ವಹಣೆ ನಡೆಯುತ್ತಿತ್ತು.

5 ಮೊಹಮ್ಮದ್ ಶಕೀಬ್
ಮೂಲತಃ ತಮಿಳುನಾಡಿನ ಮೊಹಮ್ಮದ್ ಶಾಕಿಬ್ ರಿಚ್ಮಂಡ್​ ಟೌನ್​ನ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ.

6 ಶಾಹಿದ್ ನಸೀರ್​
ಬೆಂಗಳೂರು ಮೂಲದ ಶಾಹಿದ್​ ನಸೀರ್ ಸ್ಟೇಟ್​ ಸೋಷಿಯಲ್ ಮೀಡಿಯಾ ಇನ್​ಚಾರ್ಜ್ ಆಗಿದ್ದು ಪಿಎಫ್​​ಐನಲ್ಲಿ ಸಕ್ರಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದಾನೆ.

7. ಮೊಹಮ್ಮದ್‌ ಫಾರೂಖ್‌
ಬೆಂಗಳೂರು ಮೂಲದ ಈತ ಪಿಎಫ್‌ಐ ಸಕ್ರಿಯ ಮುಖಂಡನಾಗಿದ್ದಾನೆ.

Live Tv

Leave a Reply

Your email address will not be published.

Back to top button