Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸ್ಪ್ಯಾಮ್‌ ಕರೆಗೆ ನಿಯಂತ್ರಣ – ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸ್ಪ್ಯಾಮ್‌ ಕರೆಗೆ ನಿಯಂತ್ರಣ – ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್‌

Latest

ಸ್ಪ್ಯಾಮ್‌ ಕರೆಗೆ ನಿಯಂತ್ರಣ – ಇನ್ಮುಂದೆ 1600 ಸರಣಿ ಸಂಖ್ಯೆಯಿಂದಲೇ ಬರಲಿದೆ ಹಣಕಾಸು ಸಂಸ್ಥೆಗಳ ಕಾಲ್‌

Public TV
Last updated: November 20, 2025 1:25 pm
Public TV
Share
3 Min Read
Spam Call
SHARE

– 1600 ಸರಣಿ ನಂಬರ್‌ ಕಡ್ಡಾಯಗೊಳಿಸಿದ ಟ್ರಾಯ್‌
– ಸೈಬರ್‌ ಕ್ರೈಂ ತಡೆಗಟ್ಟಲು ಕ್ರಮ

ನವದೆಹಲಿ: ಸೈಬರ್‌ ಕ್ರೈಂ (Cyber Crime) ವಂಚನೆ ಪ್ರಕರಣ ಜಾಸ್ತಿ ಆಗುತ್ತಿದ್ದಂತೆ ಅವುಗಳನ್ನು ತಡೆಗಟ್ಟಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹಣಕಾಸು ಸಂಸ್ಥೆಗಳಿಗೆ ಒಂದೇ ಸರಣಿಯ ನಂಬರ್‌ಗಳಿಂದ ಕರೆಯನ್ನು ಕಳುಹಿಸಬೇಕೆಂದು ಕಡ್ಡಾಯ ಮಾಡಿ ಆದೇಶ ಪ್ರಕಟಿಸಿದೆ.

ಬ್ಯಾಂಕುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಪಿಂಚಣಿ ನಿಧಿ ಕಂಪನಿಗಳು 1600 ಸರಣಿ ಸಂಖ್ಯೆಯಿಂದಲೇ ಕರೆ ಕಳುಹಿಸಬೇಕೆಂದು ಟ್ರಾಯ್‌ ಸೂಚಿಸಿದೆ.

ಕಂಪನಿಗಳೇ ಕಳುಹಿಸಿದ ಕರೆ ಯಾವುದು? ಮತ್ತು ಮೋಸ ಮಾಡುವ ಸ್ಪ್ಯಾಮ್‌ ಕರೆ (Spam Call) ಯಾವುದು ಎಂದು ಪತ್ತೆಹಚ್ಚಲು ಟ್ರಾಯ್‌ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು ಮಾರ್ಚ್ 2026 ರೊಳಗೆ ಹಂತ ಹಂತವಾಗಿ ಜಾರಿಯಾಗಲಿದೆ.  ಇದನ್ನೂ ಓದಿ: ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ವಹಿಸಿ – ಸಿಎಂಗೆ ಪತ್ರ ಬರೆದ ಬೊಮ್ಮಾಯಿ

ದೂರಸಂಪರ್ಕ ಇಲಾಖೆ (DoT) ʼ1600ʼ ಸಂಖ್ಯಾ ಬ್ಲಾಕ್ ಅನ್ನು ನಿರ್ದಿಷ್ಟವಾಗಿ ನಿಯಂತ್ರಿತ ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ನಂತರ ಈ ನಿರ್ದೇಶನ ಬಂದಿದೆ. ಪ್ರಸ್ತುತ ಈಗ ಸುಮಾರು 485 ಹಣಕಾಸು ಸಂಸ್ಥೆಗಳು ಈಗಾಗಲೇ 1600 ಸರಣಿಯನ್ನು ಬಳಸುತ್ತಿದ್ದು 2,800 ಕ್ಕೂ ಹೆಚ್ಚು ಸಂಖ್ಯೆಗಳನ್ನು ಒಳಗೊಂಡಿವೆ.

1600 ಸರಣಿಯೇ ಯಾಕೆ?
ಇಲ್ಲಿಯವರೆಗಿನ ವ್ಯವಸ್ಥೆಯಲ್ಲಿ ಬ್ಯಾಂಕ್‌ನಿಂದ ಬರುತ್ತಿರುವ ಕರೆ ಯಾವುದು ಬೇರೆಯವರು ಕಳುಹಿಸಿದ ಕರೆ ಯಾವುದು ಎಂದು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ವ್ಯವಸ್ಥೆಯಲ್ಲಿರುವ ಈ ಲೋಪದ ಲಾಭ ಪಡೆಯುತ್ತಿರುವ ಕಳ್ಳರು ಈಗ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ನಾವು ಬ್ಯಾಂಕ್‌ ಸಿಬ್ಬಂದಿ ಎಂದು ನಂಬಿಸಿ ಗ್ರಾಹಕರ ವೈಯಕ್ತಿಕ ವಿವರ ಪಡೆದು ಹಣವನ್ನು ದೋಚುತ್ತಿದ್ದಾರೆ.

ಸೈಬರ್‌ ಕಳ್ಳರು ಈ ತಂತ್ರವನ್ನೇ ಬಳಸಿ ಹೆಚ್ಚು ಹೆಚ್ಚು ಕೃತ್ಯ ಎಸಗುತ್ತಿದ್ದಾರೆ ಎನ್ನುವ ವಿಚಾರ ಟ್ರಾಯ್‌ ಗಮನಕ್ಕೆ ಬರುತ್ತಿದ್ದಂತೆ ಈಗ 1600-ಸರಣಿಯ ನಂಬರ್‌ನಿಂದಲೇ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಕರೆ ಕಳುಹಿಸಬೇಕೆಂದು ಸೂಚಿಸಿದೆ. ಇದರಿಂದ ನಾಗರಿಕರಿಗೆ ವಿಶ್ವಾಸಾರ್ಹ ಹಣಕಾಸು ಕರೆಗಳನ್ನು ಗುರುತಿಸಲು ಸಹಾಯವಾಗಲಿದೆ ಎಂದು TRAI ಹೇಳಿದೆ.   ಇದನ್ನೂ ಓದಿ:  ಸುವರ್ಣಸೌಧ ನವೀಕರಣಕ್ಕೆ ಕೇಳಿದ್ದು 11 ಕೋಟಿ, ಬಿಡುಗಡೆಯಾಗಿದ್ದು 1 ಕೋಟಿ

Your safety is our priority!

If you receive a call from a number starting with +91-1600, rest assured- it’s a genuine and legitimate call.

These numbers are used for transactional and service-related calls to customers, helping you distinguish legitimate calls from spam and… pic.twitter.com/55Arvwzl0m

— State Bank of India (@TheOfficialSBI) July 6, 2025

ಯಾವ ರೀತಿ ಇರಲಿದೆ ನಂಬರ್‌?

+91-1600 ಸಂಖ್ಯೆಯಿಂದ ಕರೆ ಬರಲಿದೆ. +91 ಭಾರತದ ಕೋಡ್‌ ಆಗಿರುವ ಕಾರಣ ಈ ಸಂಖ್ಯೆ ಆರಂಭದಲ್ಲಿ ಇರುತ್ತದೆ. ಉದಾಹರಣೆಗೆ ಎಸ್‌ಬಿಐ ಕರೆಗಳು +91-1600-01-8000, +91-1600-01-8002  ಈ ಸರಣಿಯಿಂದ  ಆರಂಭವಾಗುತ್ತದೆ.

ಯಾರಿಗೆ ಯಾವಾಗ ಡೆಡ್‌ಲೈನ್‌?
ಸೆಬಿ ನಿಯಂತ್ರಿತ ಮ್ಯೂಚುವಲ್ ಫಂಡ್‌ಗಳು ಮತ್ತು AMCಗಳು ಫೆಬ್ರವರಿ 15, 2026 ರೊಳಗೆ, ಅರ್ಹ ಸ್ಟಾಕ್‌ಬ್ರೋಕರ್‌ಗಳು (QSBಗಳು) 15 ಮಾರ್ಚ್ 2026 ರೊಳಗೆ ಜಾರಿ ಮಾಡಬೇಕಾಗುತ್ತದೆ.

ಆರ್‌ಬಿಐ-ನಿಯಂತ್ರಿತ ವಾಣಿಜ್ಯ ಬ್ಯಾಂಕುಗಳು (ಸಾರ್ವಜನಿಕ, ಖಾಸಗಿ, ವಿದೇಶಿ) ಜನವರಿ 1, 2026 ರೊಳಗೆ, ದೊಡ್ಡ ಎನ್‌ಬಿಎಫ್‌ಸಿಗಳು (ಆಸ್ತಿ ಗಾತ್ರ > ರೂ. 5,000 ಕೋಟಿ ರೂ.), ಪಾವತಿ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಫೆಬ್ರವರಿ 1, 2026 ರೊಳಗೆ ಜಾರಿ ಮಾಡಬೇಕು.

ವಿಮಾ ವಲಯದಲ್ಲಿ, ಅಂತಿಮ ದಿನಾಂಕಗಳನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ಜೊತೆ ಚರ್ಚೆ ನಡೆಸಿ ಬಳಿಕ ಘೋಷಿಸಲಾಗುವುದು ಎಂದು TRAI ಹೇಳಿದೆ.

TAGGED:bankcyber crimeindiaSpam Calltraiಟ್ರಾಯ್ಬ್ಯಾಂಕ್ಭಾರತಸೈಬರ್ ಕ್ರೈಂಸ್ಪ್ಯಾಮ್‌ ಕಾಲ್‌
Share This Article
Facebook Whatsapp Whatsapp Telegram

Cinema news

Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi
Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories

You Might Also Like

HC BALAKRISHNA
Bengaluru City

ನಾಯಕತ್ವ ಬದಲಾವಣೆ ಚರ್ಚೆ ಮುಗಿದ ಅಧ್ಯಾಯ ಅಲ್ಲ: ಹೆಚ್.ಸಿ.ಬಾಲಕೃಷ್ಣ

Public TV
By Public TV
9 minutes ago
congress mlas randeep singh surjewala
Bengaluru City

ಕಾಂಗ್ರೆಸ್‌ನಲ್ಲಿ ಸಂಪುಟ ಪುನಾರಚನೆ ಸರ್ಕಸ್ – 12 ಶಾಸಕರಿಂದ ರಣದೀಪ್ ಸುರ್ಜೇವಾಲ ಭೇಟಿ

Public TV
By Public TV
25 minutes ago
krishna river 200361 960 720
Latest

ಕೃಷ್ಣಾ ನದಿಯಲ್ಲಿ ಕುರಿಗಾಹಿ ಮೇಲೆ ಮೊಸಳೆ ದಾಳಿ – ಬಲಗೈ ಕಟ್‌

Public TV
By Public TV
1 hour ago
Vinay Kulkarni 1 1
Bengaluru City

ಸೆಲ್‌ ಒಳಗೆ ಹೋಗ್ತಿದ್ದಂತೆ ಕಣ್ಣೀರು – ಪರಪ್ಪನ ಅಗ್ರಹಾರ ಜೈಲಲ್ಲಿ ಇಡೀ ರಾತ್ರಿ ನಿದ್ದೆ ಮಾಡದ ಕುಲಕರ್ಣಿ

Public TV
By Public TV
2 hours ago
pm modi mann ki baat
Latest

ಮಹಿಳೆಯರನ್ನು ಗೌರವಿಸುವುದು ದೇಶವನ್ನೇ ಗೌರವಿಸಿದಂತೆ: ಮಹಿಳಾ ಮೀಸಲಾತಿ ಕಾನೂನು ಶ್ಲಾಘಿಸಿದ ಮೋದಿ

Public TV
By Public TV
2 hours ago
DK Shivakumar
Bengaluru City

ಕುರ್ಚಿ ಆಸೆಗಾಗಿ ಡಿಕೆಶಿ ವಿರೋಧಿ ಬಣದ ನಾಯಕರನ್ನು ಹೊಂಚು ಹಾಕಿ, ಸಂಚು ರೂಪಿಸಿ ಮುಗಿಸುತ್ತಿದ್ದಾರೆ: ಜೆಡಿಎಸ್ ಕಿಡಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?