ಪ್ರೇಯಸಿಯನ್ನು ಭೇಟಿ ಮಾಡಲು ಹೋದವನಿಗೆ ಕಾದಿತ್ತು ದುರಂತ!

Public TV
1 Min Read
YOUTH ASSUALT COLLAGE

ಮೀರತ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಹೋಗಿದ್ದಾಗ ಆಕೆಯ ಕುಟುಂಬದವರು ಆತನ ಕೈ- ಕಾಲು ಕಟ್ಟಿ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮೀರತ್‍ ನಲ್ಲಿರುವ ಖಾರ್‍ಕೌದ ಕ್ಷೇತ್ರದಲ್ಲಿ ನಡೆದಿದೆ.

ವಿಶಾಲ್ ಹಲ್ಲೆಗೊಳಗಾದ ಯುವಕ. ಪ್ರೇಯಸಿಯನ್ನು ಭೇಟಿ ಮಾಡಲು ವಿಶಾಲ್ ಹೋಗಿದ್ದನು. ಆಗ ಯುವತಿಯ ಕುಟುಂಬದವರು ಹಾಗೂ ಗ್ರಾಮಸ್ಥರು 1 ಗಂಟೆಕ್ಕೂ ಹೆಚ್ಚು ಕಾಲ ಥಳಿಸಿದ್ದಾರೆ. ವಿಶಾಲ್‍ನನ್ನು ಥಳಿಸುವಾಗ ಅಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ಆ ವಿಡಿಯೋವನ್ನು ಮಾಡಿದ್ದಾರೆ.

ಪ್ರೇಯಸಿಯ ಕುಟುಂಬದವರು ಹಾಗೂ ಗ್ರಾಮಸ್ಥರು ವಿಶಾಲ್‍ನನ್ನು ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ವೈರಲ್ ವಿಡಿಯೋ ನೋಡಿದ ಪೊಲೀಸರು ಸ್ವತಃ ಕೇಸ್ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Youth assualt

ಅತರಾಡಾ ಗ್ರಾಮದ ನಾನಿಹಾಲ್‍ನಲ್ಲಿರುವ ಯುವತಿ ತನ್ನ ಮಾವನ ಮನೆಗೆ ಎಂದು ಬಂದಿದ್ದಳು. ಆಗ ವಿಶಾಲ್ ಹಾಗೂ ಯುವತಿ ನಡುವೆ ಮಾತುಕತೆ ನಡೆದು ವಾಟ್ಸಾಪ್‍ನಲ್ಲಿ ಚಾಟಿಂಗ್ ನಡೆಸುತ್ತಿದ್ದರು. ನಂತರ ವಿಶಾಲ್ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ನಿರ್ಧರಿಸಿದನು. ಆ ವಿಷಯ ಯುವತಿಯ ಕುಟುಂಬದವರಿಗೆ ತಿಳಿದು ಆತನನ್ನು ಹಿಡಿದು ಕೈ-ಕಾಲು ಕಟ್ಟಿ ಥಳಿಸಿದ್ದಾರೆ.

ಸದ್ಯ ವಿಶಾಲ್ ತಂದೆ ಯುವತಿಯ ಸಹೋದರ ಹಾಗೂ ಆಕೆಯ ತಂದೆಯ ಮೇಲೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 147, 323, 342 ಹಾಗೂ 506 ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡು, ಆರೋಪಿಗಳನ್ನು ಹುಡುಕುತ್ತಿದ್ದಾರೆ.

Youth Assualt 3

Share This Article