ಮುಂಬೈ: ನವಜಾತ ಶಿಶುಗಳ ಮಾರಾಟ ಜಾಲಗಳ ವಿರುದ್ಧದ ಪೊಲೀಸ್ ತನಿಖೆಮಾಡುತ್ತಿದ್ದ ಸಂದರ್ಭದಲ್ಲಿ ವಡಾಲಾದಲ್ಲಿ ತಂದೆಯೇ ಒಂದು ಲಕ್ಷ ರೂ. ಸಾಲ ತೀರಿಸಲು ನವಜಾತ ಗಂಡು ಶಿಶುವನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ.
ಮಗುವಿನ ಫೋಷಕರನ್ನು ಮುನ್ನಾ ಶೇಖ್ ಮತ್ತು ಶಾಜಿಯಾ ಎಂದು ಗುರುತಿಸಲಾಗಿದ್ದು, ಮಗುವನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಸೂತ್ರಧಾರಿ ಮಹಿಳೆ ಜುಲಿಯಾ ಫೆರ್ನಾಂಡಿಸ್‍ನನ್ನು (29) ಪೊಲೀಸರು ಬಂಧಿಸಿದ್ದಾರೆ
Advertisement
ಶೇಖ್ 1 ಲಕ್ಷ ರೂ. ಸಾಲ ಪಡೆದಿದ್ದ. ಸಾಲ ಕೊಟ್ಟವರು ಸಾಲ ತೀರಿಸುವಂತೆ ಒತ್ತಡ ಹಾಕುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಗಂಡು ಮಗನನ್ನು 20 ಸಾವಿರ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಂತರ ವಡಾಲಾದಲ್ಲಿದ್ದ ಅವರ ಮನೆಯನ್ನು ಪರಿಶೀಲನೆ ಮಾಡಿದಾಗ ಶಾಜಿಯಾ ಆಸ್ಪತ್ರೆಗೆ ದಾಖಲಾದ ದಿನಾಂಕ ಮತ್ತು ಡಿಸ್ಚಾರ್ಜ್ ಆದ ದಿನದ ದಾಖಲಾತಿಗಳು ದೊರೆತಿವೆ.
Advertisement
ನರ್ಸಿಂಗ್ ಓದುತ್ತಿದ್ದ ಜೂಲಿಯಾ ಫೆರ್ನಾಂಡಿಸ್ ಮಗುವನ್ನು 20 ಸಾವಿರ ರೂಪಾಯಿಗೆ ಖರೀದಿಸಿ, ಮಕ್ಕಳಿಲ್ಲದ ದಂಪತಿ 1.5 ಲಕ್ಷ ರೂ.ಗೆ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದ್ದಳು. ಈ ವಿಚಾರದ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದಾಗ ಜೂಲಿಯಾ, ನನಗೆ ಅಪಘಾತವಾಗಿ ಕಾಲುಗಳು ನೋವಾಗಿತ್ತು. ಅದಕ್ಕೆ ಆಪರೇಷನ್ ಮಾಡಿಸಬೇಕಿತ್ತು. ಹೀಗಾಗಿ ನಾನು ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದೆ ಎಂದು ತಿಳಿಸಿದ್ದಾಳೆ ಎಂಬುದಾಗಿ ಅಧಿಕಾರಿ ವಿವರಿಸಿದ್ದಾರೆ.
Advertisement
ಕೋರ್ಟ್ ಆ ಮಗುವಿಗೆ ಅಧಿರಾಜ್ ಎಂದು ಹೆಸರು ಇಟ್ಟಿದ್ದು, ಮಕ್ಕಳ ಕಲ್ಯಾಣ ಕೇಂದ್ರಕ್ಕೆ ಮಗುವನ್ನು ಸೇರಿಸಲಾಗಿದೆ ಎಂದು ತಿಳಿಸಿದರು.