ಬೆಂಗಳೂರು: ಇದೇ ಮೊದಲ ಬಾರಿಗೆ ಕಾಲೇಜು ಆವರಣದಲ್ಲಿ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜುಗಳ 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ.
ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಟ್ಟು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದಡಿ ಪೋಷಕರಿಗೆ ದಂಡ ವಿಧಿಸಲಾಗಿದೆ. ಮಕ್ಕಳಿಗೆ ಬೈಕ್ ಕೊಡುವ ಮುನ್ನ ಎಚ್ಚರ ವಹಿಸಬೇಕು ಎಂದು ಅವರ ಪೋಷಕರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 25 ಲಕ್ಷ ಜನರಿಂದ ಬಾಲಕ ರಾಮನ ದರ್ಶನ – 11 ಕೋಟಿ ರೂ. ಕಾಣಿಕೆ ಸಂಗ್ರಹ
Advertisement
Advertisement
ವಿದ್ಯಾರ್ಥಿಗಳು ಮಾಡುವ ತಪ್ಪಿಗೆ ಪೋಷಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಲೈಸೆನ್ಸ್ ಇಲ್ಲದೆ ವಿದ್ಯಾರ್ಥಿಗಳು ವಾಹನಗಳನ್ನ ಚಲಾಯಿಸುತ್ತಿದ್ದರು. ಇದನ್ನು ಗಮನಿಸಿರುವ ಪೊಲೀಸರು ಕಾರ್ಯಾಚರಣೆ ನಡೆಸಿ, 23 ಕಾಲೇಜು 800 ವಾಹನಗಳ ಮಾಲೀಕರಿಗೆ ದಂಡ ಹಾಕಿದ್ದಾರೆ.
Advertisement
ಶಾಲಾ ಕಾಲೇಜುಗಳಲ್ಲಿ ಸರ್ಕ್ಯೂಲರ್ ಹೊರಡಿಸಲು ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಅಪ್ರಾಪ್ತರು ವಾಹನ ತರದಂತೆ ಸರ್ಕ್ಯೂಲರ್ ಹೊರಡಿಸಬೇಕು ಎಂದು ತಿಳಿಸಿದ್ದಾರೆ. ತಪ್ಪಿದರೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ರಾತ್ರಿ ರೈಲಿನಲ್ಲಿ ಪ್ರಯಾಣಿಸುವಾಗ ಮೊಬೈಲ್ ಸೌಂಡ್ ಜಾಸ್ತಿ ಮಾಡಿದ್ರೆ, ಜೋರಾಗಿ ಮಾತಾಡಿದ್ರೆ ಬೀಳುತ್ತೆ ಕೇಸ್
Advertisement
ಕಾಲೇಜು ಆವರಣದಲ್ಲಿದ್ದ ಸುಮಾರು 800 ವಾಹನಗಳಿಗೆ ಈಗಾಗಲೇ ದಂಡ ಬಿದ್ದಿದೆ. ಪರೀಕ್ಷೆ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುವಂತಿಲ್ಲ. ಈ ಬಾರಿ ದಂಡ ಮಾತ್ರ ವಿಧಿಸಲಾಗಿದೆ. ಮತ್ತೊಮ್ಮೆ ಇದೇ ರೀತಿ ನಡೆದರೆ ಐಪಿಸಿ ಸೆಕ್ಷನ್ ನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.