ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ನಟನೆ, ಡ್ಯಾನ್ಸ್, ಫೈಟ್ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಪುಷ್ಪ ಸಿನಿಮಾದ ಯಶಸ್ಸಿನ ನಂತರ ಇದೀಗ ಪುಷ್ಪ-2 ಸಿನಿಮಾಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅಲ್ಲು ಸಿನಿಮಾಗಳ ನಿರ್ಮಾಣಕ್ಕೆ ಕೋಟ್ಯಂತರ ರೂ. ಚೆಲ್ಲುವ ಅನೇಕ ನಿರ್ಮಾಪಕರಿದ್ದಾರೆ. ಅಲ್ಲು ಅರ್ಜುನ್ ಕಾಲ್ ಶೀಟ್‍ಗಾಗಿ ಸಾಕಷ್ಟು ನಿರ್ಮಾಪಕರು ಕ್ಯೂ ನಿಲ್ಲುತ್ತಾರೆ. ತೆಲುಗಿನಲ್ಲಿ ಇಷ್ಟೆಲ್ಲಾ ನೇಮ್, ಫೇಮ್ ಹೊಂದಿದ್ದರೂ ಅಲ್ಲು ಅರ್ಜುನ್ ಅವರ ಕಾರನ್ನು ಪೊಲೀಸರು ತಡೆದು ದಂಡ ವಿಧಿಸಿದ್ದಾರೆ.
ಹೌದು, ಈ ಹಿಂದೆ ಸೆಲಬ್ರೆಟಿಗಳು ತಮ್ಮ ಕಾರಿಗೆ ಎಂಎಲ್‍ಎ ಸ್ಟಿಕರ್ಸ್, ನಕಲಿ ಸ್ಟಿಕರ್ಸ್ ಮತ್ತು ಕಪ್ಪು ಪರದೆಯನ್ನು ಅಳವಡಿಸಿರುತ್ತಿದ್ದರು. ಆದರೆ 2012ರಲ್ಲಿ ಇವೆಲ್ಲವನ್ನು ಸುಪ್ರೀಂ ಕೋರ್ಟ್ ಬ್ಯಾನ್ ಮಾಡಿತ್ತು. ಆದರೂ ಕೆಲವು ಸೆಲೆಬ್ರಿಟಿಗಳು ತಮ್ಮ ಕಾರುಗಳಿಗೆ ಎಂಎಲ್‍ಎ ಸ್ಟಿಕರ್ಸ್, ನಕಲಿ ಸ್ಟಿಕರ್ಸ್ ಮತ್ತು ಕಪ್ಪು ಪರದೆಯನ್ನು ಹಾಕಿಕೊಂಡು ಓಡಾಡುತ್ತಿರುತ್ತಾರೆ. ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ
ಸದ್ಯ ಸಂಚಾರಿ ವಿಭಾಗದ ಪೊಲೀಸರು ಜುಬಿಲಿ ಹಿಲ್ಸ್ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು. ಇನ್ನೂ ಜುಬಿಲಿ ಹಿಲ್ಸ್ ಚೆಕ್‌ಪೋಸ್ಟ್‌ನಲ್ಲಿ ಬರುತ್ತಿದ್ದ ಅನೇಕ ವಾಹನಗಳಲ್ಲಿ ಅಂಟಿಸಿದ್ದ ಸ್ಟಿಕರ್ ಮತ್ತು ಕಪ್ಪು ಪರದೆಯನ್ನು ತೆಗೆದು ಹಾಕಿಸಿ ದಂಡ ವಿಧಿಸಿದ್ದಾರೆ. ಇದೇ ವೇಳೆ ನಟ ಅಲ್ಲು ಅರ್ಜುನ್ ಇದ್ದ ಕಾರನ್ನು ತಡೆದು, ಪೊಲೀಸು ಕಾರಿನ ಕಿಟಕಿಯಲ್ಲಿ ಅಳವಡಿಸಲಾಗಿದ್ದ ಕಪ್ಪು ಪರದೆಯನ್ನು ಸ್ಥಳದಲ್ಲಿಯೇ ತೆಗೆಸಿ, 700 ರೂ. ದಂಡ ವಿಧಿಸಿದ್ದಾರೆ. ಜೊತೆಗೆ ಅದೇ ರಸ್ತೆಯಲ್ಲಿ ಬರುತ್ತಿದ್ದ ನಟ ಕಲ್ಯಾಣ್ ರಾಮ್ ಅವರ ಕಾರನ್ನು ಸಹ ಪೊಲೀಸರು ತಡೆದು ದಂಡ ವಿಧಿಸಿದ್ದಾರಂತೆ. ಇದನ್ನೂ ಓದಿ: ತರಬೇತಿ ನಿರತ ಐಆರ್ಬಿ ಪೊಲೀಸ್ ಹೃದಯಾಘಾತದಿಂದ ಸಾವು