– ನಗರ ಪ್ರವೇಶಿಸಲು ಪ್ರಯಾಣಿಕರ ಪರದಾಟ
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ (Independence Day) ಹಾಗೂ ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ಹೀಗೆ ಸಾಲು ಸಾಲು ರಜೆ (Holiday) ಹಿನ್ನೆಲೆ ತಮ್ಮ ತಮ್ಮ ಊರಿಗೆ ತೆರಳಿದ್ದ ಜನ ಇಂದು (ಭಾನುವಾರ) ಬೆಂಗಳೂರಿಗೆ (Bengaluru) ವಾಪಸ್ ಆಗಿದ್ದಾರೆ. ಈ ಹಿನ್ನೆಲೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಸೇರಿದಂತೆ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
Advertisement
Advertisement
ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ, ಆ.16ರಂದು ವರಮಹಾಲಕ್ಷ್ಮಿ ಹಬ್ಬ ಮತ್ತು 2 ದಿನ ವೀಕೆಂಡ್ ಇದ್ದ ಹಿನ್ನೆಲೆ ಜನರು ತಮ್ಮ ಊರಿನತ್ತ ಮುಖ ಮಾಡಿದ್ದರು. ಇದೀಗ ಕೆಲಸದ ಸಲುವಾಗಿ ಮತ್ತೆ ಬೆಂಗಳೂರಿಗೆ ಜನರು ಆಗಮಿಸುತ್ತಿದ್ದಾರೆ. ಈ ಸಂದರ್ಭ ಟ್ರಾಫಿಕ್ ಜಾಮ್ (Traffic Jam) ಉಂಟಾಗಿದ್ದು, ಬೆಂಗಳೂರು ನಗರ ಪ್ರವೇಶಿಸಲು ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವ ವಿ.ಸೋಮಣ್ಣರ ಕಾರ್ಯಾಲಯ ವಿವಾದ ಸುಖಾಂತ್ಯ
Advertisement
Advertisement
ಇಷ್ಟು ಮಾತ್ರವಲ್ಲದೇ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ಸಹ ಪುಲ್ ರಶ್ ಆಗಿದ್ದು, ಕೆಂಗೇರಿ ಚೆಕ್ ಪೋಸ್ಟ್ ಬಳಿ ಜಾಮ್ ಉಂಟಾಗಿದೆ. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್ ಗ್ಯಾಂಗ್ ಅರೆಸ್ಟ್