ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡವನ್ನ ಪಾವತಿಸಬೇಕಿದೆ. ಸಂಚಾರಿ ಪೊಲೀಸರು ಸಹ ದಂಡದ ಸ್ಲಿಪ್ ಗಳನ್ನು ಹರಿದು ಸವಾರರಿಗೆ ನೀಡುತ್ತಿದ್ದಾರೆ. ದಂಡದ ಮೊತ್ತ ಕೆಲವೊಬ್ಬರಿಗೆ ವಾಹನದ ಮೌಲ್ಯಕ್ಕಿಂತ ಹೆಚ್ಚಾಗುತ್ತಿದೆ. ಮಂಗಳವಾರ ಬೈಕ್ ಸವಾರರಿಬ್ಬರಿಗೆ ಗುರುಗ್ರಾಮ ಪೊಲೀಸರು 23 ಸಾವಿರ ಮತ್ತು ಆಟೋ ಚಾಲಕನಿಗೆ 32 ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ.
ದೆಹಲಿಯ ಗೀತಾ ಕಾಲೋನಿಯ ನಿವಾಸಿ ದಿನೇಶ್ ಮದನ್ ಅವರಿಗೆ ಗುರುಗ್ರಾಮದಲ್ಲಿ 23 ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ದಿನೇಶ್, ನನ್ನ ಸ್ಕೂಟಿಯ ಮೌಲ್ಯ 15 ಸಾವಿರ ರೂ. ದಂಡವಾಗಿ 23 ಸಾವಿರ ರೂ. ಪಾವತಿಸೋದು ಹೇಗೆ ಸಾಧ್ಯ. ದಿನೇಶ್ ಬಳಿ ಲೈಸೆನ್ಸ್, ಆರ್ ಸಿ ಇರಲಿಲ್ಲ. ಎಮಿಸನ್ ಟೆಸ್ಟ್, ವಿಮೆ ಸಹ ಮಾಡಿಸದೇ ಹೆಲ್ಮೆಟ್ ಧರಿಸದೇ ಸ್ಕೂಟಿ ಚಲಾಯಿಸುತ್ತಿದ್ದರು. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಟ್ಟಬೇಕಾಗುತ್ತೆ ದುಪ್ಪಟ್ಟು ದಂಡ
Advertisement
Advertisement
ಇದೇ ರೀತಿ ಗುರುಗ್ರಾಮದ ಜೈಕಂಪುರ ವ್ಯಾಪ್ತಿಯಲ್ಲಿ ಓರ್ವ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ರಾಜೀವ್ ಚೌಕ್ ಗೆ ತೆರಳುತ್ತಿದ್ದರು. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ಒಟ್ಟು 24 ಸಾವಿರ ರೂ. ದಂಡದ ಚಲನ್ ನೀಡಿದ್ದಾರೆ. ಸಹ ಸವಾರ ಹೆಲ್ಮೆಟ್ ಧರಿಸದಕ್ಕೆ ಆತನಿಗೂ 1 ಸಾವಿರ ರೂ. ದಂಡ ಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ರಸ್ತೆಯಲ್ಲಿ ಕ್ರಿಸ್ ಕ್ರಾಸ್: ಏನಿದು ಈ ಹೊಸ ಟ್ರಾಫಿಕ್ ರೂಲ್ಸ್? ದಂಡ ಎಷ್ಟು?
Advertisement
ದಂಡ ವಿಧಿಸಿರುವ ಟ್ರಾಫಿಕ್ ಪೊಲೀಸ್ ಅಮಿತ್ ಮಾತನಾಡಿ, ಸವಾರರಿಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ತಡೆದು ದಾಖಲೆ ಕೇಳಿದಾಗ ಅವರ ಬಳಿ ವಾಹನಕ್ಕೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳು ಇರಲಿಲ್ಲ. ಇಷ್ಟು ದೊಡ್ಡ ಮೊತ್ತ ಪಾವತಿಸಬೇಕೆಂಬ ಭಯದಿಂದ ಎಲ್ಲರೂ ಸಂಚಾರಿ ನಿಯಮ ಪಾಲಿಸುತ್ತಾರೆ ಎಂಬುವುದು ನನ್ನ ನಂಬಿಕೆ ಎಂದು ಹೇಳುತ್ತಾರೆ.
Advertisement
ದಂಡದ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಪೊಲೀಸರು ದಿನೇಶ್ ಅವರ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಕೂಟರ್ ಮಾರುಕಟ್ಟೆ ಬೆಲೆ 15 ಸಾವಿರ ರೂ. ಇದೆ. ದಂಡ ವಾಹನದ ಮೌಲ್ಯಕ್ಕಿಂತ ಹೆಚ್ಚಿದೆ. ಹಾಗಾಗಿ ಸ್ಕೂಟಿಯನ್ನು ಬಿಡಿಸಿಕೊಳ್ಳದಿರಲು ದಿನೇಶ್ ಚಿಂತಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 25ರಲ್ಲಿ ಬ್ರಿಸ್ಟಲ್ ಚೌಕದ ಬಳಿ ಆಟೋ ಡ್ರೈವರ್ ಗೆ ಟ್ರಾಫಿಕ್ ಪೊಲೀಸರು 32 ಸಾವಿರ ರೂ.ಯ ದಂಡ ಹಾಕಿದ್ದಾರೆ. ಅತಿ ವೇಗ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಪರವಾನಿಗೆ, ನೋಂದಣಿ, ವಿಮೆ ಮತ್ತು ಎಮಿಷನ್ ಟೆಸ್ಟ್ ಮಾಡಿಸದಕ್ಕೆ ಒಟ್ಟು 32 ಸಾವಿರ ರೂ. ದಂಡ ಹಾಕಲಾಗಿದೆ. ಆಟೋ ಡ್ರೈವರ್ ಮೊಹಮ್ಮದ್ ಮುಸ್ತಕಿಲ್ ಪಶ್ಚಿಮ ಬಂಗಾಳದ ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಗುರುಗ್ರಾಮದಲ್ಲಿ ವಾಸವಾಗಿದ್ದಾರೆ. ಎರಡು ತಿಂಗಳಿನಿಂದ ಆಟೋ ಚಲಾಯಿಸುತ್ತಿದ್ದರು. ದಂಡ ಪಾವತಿಸದ ಹಿನ್ನೆಲೆಯಲ್ಲಿ ಪೊಲೀಸರು ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ.