ಮಡಿಕೇರಿ: ಕೊಡಗಿನಾದ್ಯಂತ ಹುತ್ತರಿಯ ಸಂಭ್ರಮ ಮನೆ ಮಾಡಿದೆ. ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಕೊಡವ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡಿವೆ.
ಕೊಡವರ ವಿಶೇಷ ವಾಲಗದೊಂದಿಗೆ ಸಂಸ್ಕೃತಿ ಆಚಾರ ವಿಚಾರಗಳ ಆಟ್ ಪಾಟ್ ಕಾರ್ಯಕ್ರಮಗಳಿಗೆ ಮಡಿಕೇರಿ ಕೋಟೆಯ ಆವರಣ ಸಾಕ್ಷಿಯಾಯಿತು. ಕೊಡವರ ಸಾಂಪ್ರದಾಯಿಕ ಮತ್ತು ಶ್ರೇಷ್ಠ ಹಬ್ಬವೆಂದು ಗುರುತಿಸಿಕೊಂಡಿರುವ ಹುತ್ತರಿಯ ಆಚರಣೆ ಮಡಿಕೇರಿಯ ಕೋಟೆಯ ಆವರಣದಲ್ಲಿ ಮನೆ ಮಾಡಿತ್ತು.
Advertisement
Advertisement
ಇತಿಹಾಸದ ಗತವೈಭವಕ್ಕೆ ಕೋಟೆ ಆವರಣ ಸಾಕ್ಷಿಯಾಯಿತು. ಹಿಂದಿನಿಂದಲೂ ಆಚರಿಸಿಕೊಂಡು ಬಂದ ಕಲೆ ಸಂಸ್ಕೃತಿಗಳು ಅನಾವರಣಗೊಂಡವು. ಕೊಡಗಿನ ಸುಗ್ಗಿ ಹಬ್ಬ ಹುತ್ತರಿ ಪ್ರಯುಕ್ತ ನಡೆದ ಸಾಂಪ್ರದಾಯಿಕ ಕೋಲಾಟ ನೋಡುಗರ ಮನಸೂರೆಗೊಂಡಿತು.
Advertisement
ಹಿಂದೆ ಕೊಡಗನ್ನಾಳುತ್ತಿದ್ದ ರಾಜರು ಕೋಟೆಯ ಆವರಣದಲ್ಲಿ ಕೋಲಾಟ ನಡೆಸಲು ಅನುವು ಮಾಡಿಕೊಟ್ಟಿದ್ದರು. ಆ ನಂತರದಲ್ಲಿ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಕೋಲಾಟಗೆ ಕೋಟೆಯ ಹೊರತಾಗಿ ಗದ್ದುಗೆಯ ಬಳಿ ಅವಕಾಶ ಕಲ್ಪಿಸಿಕೊಟ್ಟರು. ತದನಂತರದಲ್ಲಿ ಕೆಲವು ವರ್ಷಗಳ ಇತ್ತೀಚೆಗೆ ಮತ್ತೆ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಸುವ ಮೂಲಕ ತಮ್ಮ ಐತಿಹಾಸಿಕ ಕಲೆ ಸಂಸ್ಕೃತಿಯನ್ನು ಬಿಂಬಿಸಲಾಯಿತು.