ನವದೆಹಲಿ: ದೇಶದಲ್ಲಿ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಕುರಿತಾಗಿ ಸಂಪೂರ್ಣ ನಿಷೇಧಕ್ಕೂ ಮೊದಲು ನಮಗೆ ಒಂದು ವರ್ಷಗಳ ಕಾಲ ಅವಕಾಶ ಕೊಡಿ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್‍ಗೆ ಮನವಿ ಸಲ್ಲಿಸಿದ್ದಾರೆ.
Advertisement
ಇಂದು ಭೂಪೇಂದರ್ ಯಾದವ್ ಅವರಿಗೆ ಮನವಿ ಸಲ್ಲಿಸಿದ ವರ್ತಕರ ಸಂಘ ಜುಲೈ 1 ರಿಂದ ಜಾರಿಗೆ ಬಂದ ಏಕ-ಬಳಕೆಯ ಪ್ಲಾಸ್ಟಿಕ್ ನಿಷೇಧವನ್ನು ಅನುಸರಿಸಲು ಒಂದು ವರ್ಷದ ಅವಧಿಯನ್ನು ಕೇಳಿದೆ. ಉದ್ಯಮದಾರರನ್ನು ಮತ್ತು ಉದ್ಯೋಗಿಗಳಿಗೆ ಪೂರಕವಾಗಿ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಜುಲೈ 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಬ್ಯಾನ್ – ಮಾರಾಟ ಮಾಡಿದ್ರೆ ದುಬಾರಿ ದಂಡ
Advertisement
ವರ್ತಕರ ಸಂಘದ ಪ್ರಕಾರ ಈಗಾಗಲೇ ಕೆಲ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಉದ್ಯಮವಾಗಿಸಿಕೊಂಡು ಹಲವಾರು ಕಂಪನಿಗಳು ಇವೆ. ಹಲವು ಕಂಪನಿಗಳು ಈಗಾಗಲೇ ಸ್ಟಾಕ್ ಇಟ್ಟಿರುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಬಳಕೆಗೆ ಅವಕಾಶ ಮಾಡಿಕೊಡಬೇಕು. ಹಲವು ಕಂಪನಿಗಳು ಬ್ಯಾಂಕ್‍ಗಳಲ್ಲಿ ಸಾಲ ಮಾಡಿ ಉದ್ಯಮಗಳನ್ನು ಆರಂಭಿಸಿದೆ. ಇದೀಗ ಏಕಾಏಕಿ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಹೊಡೆತ ಬೀಳುತ್ತದೆ. ಸಾವಿರಾರೂ ಉದ್ಯೋಗಿಗಳು ಬೀದಿ ಪಾಲಾಗುತ್ತಾರೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ವರ್ಷಕ್ಕೆ 60,000 ಕೋಟಿ ರೂ.ಗಳ ವ್ಯವಹಾರ ಪ್ಲಾಸ್ಟಿಕ್ ಮೂಲಕ ನಡೆಯುತ್ತದೆ. ಹಾಗಾಗಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮುಂದಿನ ಕ್ರಮ ವಹಿಸಬೇಕಾಗಿ ಮನವಿ ಮಾಡಿಕೊಂಡಿದೆ.
Advertisement
Advertisement
ಜುಲೈ 1 ರಿಂದ ಪ್ಲಾಸ್ಟಿಕ್ ಕಡ್ಡಿ ಹೊಂದಿರುವ ಇಯರ್ ಬಡ್ಸ್, ಬಲೂನ್‍ನ ಪ್ಲಾಸ್ಟಿಕ್ ಕಡ್ಡಿ, ಐಸ್‍ಕ್ರೀಂ-ಕ್ಯಾಂಡಿ ಸ್ಟಿಕ್, ಪ್ಲಾಸ್ಟಿಕ್ ಪ್ಲೇಟ್ಸ್, ಕಪ್ಸ್, ಗ್ಲಾಸ್, ಸ್ಪೂನ್, ಪ್ಲಾಸ್ಟಿಕ್ ಚಾಕು ಸೇರಿದಂತೆ ಇನ್ನಿತರ ಕೆಲ ಏಕಬಳಕೆಯ ಪ್ಲಾಸ್ಟಿಕ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್ ಸಿನ್ಹಾ
2016ರ ನಂತರ ನಿಷೇಧ ಜಾರಿಯಾದ ಬಳಿಕ ಹಲವು ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಿ ಮುಚ್ಚಲಾಗಿದೆ. ಅದಾಗ್ಯೂ ಪ್ಲಾಸ್ಟಿಕ್ ಬಳಕೆಯಾಗುತ್ತಲೇ ಇದ್ದು, ಇದು ಮಾರಾಟಗಾರರು, ತಿನಿಸುಗಳು, ಹಣ್ಣು ಮತ್ತು ತರಕಾರಿ ಮಾರಾಟಗಾರರು ಮತ್ತು ಅಂಗಡಿಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಹಂತಹಂತವಾಗಿ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.