ಚಾಮರಾಜನಗರ: ನಗರಸಭೆಗೆ ಸೇರಿದ ಟ್ರ್ಯಾಕ್ಟರ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ತರಕಾರಿ ಮಾರುತ್ತಿದ್ದ ಮಹಿಳೆ ಮೇಲೆ ಹರಿದು ಮಹಿಳೆ ಸಾವನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಉಮ್ಮತ್ತೂರು ಗ್ರಾಮದ ಗೌರಮ್ಮ ಮೃತ ದುರ್ದೈವಿ. ಸೋಮವಾರ ಸಂಜೆ ಚಾಮರಾಜೇಶ್ವರ ದೇವಾಲಯದ ಬಳಿ ಗೌರಮ್ಮ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಪಕ್ಕದಲ್ಲೆ ನಿಂತಿದ್ದ ಟ್ರ್ಯಾಕ್ಟರನ್ನು ಚಾಲಕ ಮುಂದೆ ತೆಗೆಯಲು ಹೋಗಿದ್ದಾನೆ. ಆಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಅಲ್ಲೆ ಇದ್ದ ಬೀದಿವ್ಯಾಪಾರಿಗಳ ಮೇಲೆ ಹರಿದಿದ್ದು, ಗೌರಮ್ಮ ಟ್ರ್ಯಾಕ್ಟರ್‍ಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಈ ಘಟನೆಯ ದೈಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
https://www.youtube.com/watch?v=hPg5-7NyXyY&feature=youtu.be

