ಭೀಕರ ಅಪಘಾತ – ಟ್ರಾಕ್ಟರ್ ಪಲ್ಟಿಯಾಗಿ 7 ಮಂದಿ ಸಾವು

Public TV
1 Min Read
BLG ACCIDENT AV 1

– ಕಬ್ಬು ಕಟಾವ್‍ಗೆ ಹೋಗ್ತಿದ್ದಾಗ ದುರಂತ

ಬೆಳಗಾವಿ: ಸೇತುವೆ ಮೇಲಿಂದ ಟ್ರ್ಯಾಕ್ಟರ್ ಬಿದ್ದು ಏಳು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.

ಶೇಖಪ್ಪಾ ಕೆದಾರಿ (38), ಗುಲಾಬೀ ಹುಣಸಿಕಟ್ಟಿ (35), ಶಾಂತವ್ವಾ ಅಳಗೋಡಿ (65), ಶಾಂತವ್ವಾ (63), ನೀಲವ್ವಾ ಮುತ್ನಾಳ್, ಅಶೋಕ್ ಕೇದಾರಿ ಮತ್ತು ತಂಗೆವ್ವ ಹುಣಸಿಕಟ್ಟಿ ಮೃತ ದುರ್ದೈವಿಗಳು. ಮೃತರೆಲ್ಲರೂ ಬೋಗೂರ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇಟಗಿ ಮತ್ತು ಬೋಗೂರ ಗ್ರಾಮದ ಮಧ್ಯದ ಸೇತುವೆ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.

vlcsnap 2020 02 08 13h19m43s6

ಮೃತರೆಲ್ಲತರೂ ಒಂದೇ ಟ್ರ್ಯಾಕ್ಟರಿನಲ್ಲಿ ಬೋಗೂರ ಗ್ರಾಮದಿಂದ ಇಟಗಿಗೆ ಕಬ್ಬು ಕಟಾವು ಮಾಡಲು ತೆರಳುತ್ತಿದ್ದರು. ಆದರೆ ಇಟಗಿ ಗ್ರಾಮದ ಬಳಿ ಹೋಗುತ್ತಿದ್ದಂತೆ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಸೇತುವೆ ಮೇಲಿಂದ ಕೆಳಗೆ ಬಿದ್ದಿದೆ. ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದಾರೆ.

ಇನ್ನೂ ಮೂವರನ್ನು ತಕ್ಷಣ ಖಾನಾಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಒಟ್ಟಾಗಿ ಏಳು ಮಂದು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಈ ಘಟನೆ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *