BagalkotCrimeDistrictsKarnatakaLatestMain Post

ತೆರೆದ ಬಾವಿಗೆ ಬಿದ್ದ  ಟ್ರ್ಯಾಕ್ಟರ್ – ಓರ್ವ ಕಣ್ಮರೆ

Advertisements

ಬಾಗಲಕೋಟೆ: ತೆರೆದ ಬಾವಿಗೆ ಟ್ರ್ಯಾಕ್ಟರ್ ಬಿದ್ದು, ಓರ್ವ ಕಣ್ಮರೆಯಾಗಿರುವ ಘಟನೆ ಕಂದಗಲ್ ಗ್ರಾಮದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದ ತೋಟದ ಬಾವಿಯಲ್ಲಿ ಈ ಘಟನೆ ಸಂಭವಿಸಿದೆ. ಕಬ್ಬು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ತೆರೆದ ದೊಡ್ಡ ಬಾವಿಯಲ್ಲಿ ಬಿದ್ದಿದೆ. ಟ್ರ್ಯಾಕ್ಟರ್ ನಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಒಬ್ಬ ಈಜಿಕೊಂಡು ದಡ ಸೇರಿದ್ದು, ಮತ್ತೊಬ್ಬ ಬಾವಿಯಯಲ್ಲಿ ಕಣ್ಮರೆಯಾಗಿದ್ದಾರೆ.

ಘಟನೆಯ ಬಳಿಕ ಸ್ಥಳಕ್ಕೆ ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಬಾವಿಯ ಒಳಗೆ ಕಾಣೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ. ಕಾಣೆಯಾಗಿರುವ ಕಾರ್ಮಿಕ ಕಲಬುರಗಿಯವರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಡಿ.28 ರಿಂದ ರಾಜ್ಯದಲ್ಲಿ 10 ದಿನ ನೈಟ್ ಕರ್ಫ್ಯೂ ಜಾರಿ – ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್

POLICE JEEP

 

Leave a Reply

Your email address will not be published.

Back to top button