ರಾಯಚೂರು: ಜಿಲ್ಲೆಯಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದರೂ ಯಾವುದೇ ಭಯವಿಲ್ಲದೆ ಪ್ರವಾಸಿಗರು ನದಿ ತಟದಲ್ಲಿ ಮೋಜುಮಸ್ತಿಗೆ ಮುಂದಾಗಿದ್ದಾರೆ.
ಮಾನ್ವಿ ತಾಲೂಕಿನ ರಾಜಲಬಂಡಾ ಗ್ರಾಮದಲ್ಲಿ ಜನರು ಸೆಲ್ಫಿ ಕ್ಲಿಕ್ಕಿಸಿ ಹಾಗೂ ಹರಿಯುವ ನೀರಿಗೆ ಧುಮುಕಿ ಈಜುವ ಮೂಲಕ ಹುಚ್ಚಾಟ ಮೆರೆಯುತ್ತಿದ್ದಾರೆ. ರಾಜಲಬಂಡಾ ತಿರುವು ಯೋಜನೆ ಆಣೆಕಟ್ಟು ಬಳಿ ನೂರಾರು ಪ್ರವಾಸಿಗರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ
Advertisement
Advertisement
ತುಂಗಭದ್ರಾ ಜಲಾಶಯದಿಂದ 1,55,920 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಭಾರೀ ಪ್ರಮಾಣದ ನೀರಲ್ಲಿ ಸೆಲ್ಫಿಗೋಸ್ಕರ ಜನರು ನದಿಗೆ ಇಳಿಯುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಅಪಾಯವಾಗುವ ಸಾಧ್ಯತೆಯ ನಡುವೆಯೇ ರಾಜಲಬಂಡಾ ಆಣೆಕಟ್ಟು ನೋಡಲು ಆಗಮಿಸುತ್ತಿರುವ ನೂರಾರು ಪ್ರವಾಸಿಗರು ಹುಚ್ಚಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮ, ಜಾತಿಯವರಿಗೆ ಸಿಎಂ ಸ್ಥಾನ ಮೀಸಲು ಅಲ್ಲ: ಡಿಕೆಶಿಗೆ ಆರ್. ಅಶೋಕ್ ತಿರುಗೇಟು
Advertisement
Advertisement
ಮೀನು ಹಿಡಿಯಲು ದೂರದ ಊರುಗಳಿಂದ ಬರುತ್ತಿರುವ ಜನರು ನದಿ ತಟದಲ್ಲೇ ಕಾಲ ಕಳೆಯುತ್ತಿದ್ದಾರೆ. ಕ್ರೇಜ್‌ಗಾಗಿ ಮೀನು ಹಿಡಿಯಲು ಜನ ಮುಂದಾಗಿದ್ದಾರೆ. ಸ್ಥಳದಲ್ಲಿ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಇಲ್ಲದಿರುವುದರಿಂದ ಜನರ ಮೋಜು ಮಸ್ತಿ ಹೆಚ್ಚಾಗಿದೆ.