ಬಳ್ಳಾರಿ: ಮದುವೆಯಲ್ಲಿ ವರ-ವಧುವಿನ ಫೋಟೋ ತೆಗೆದಿದ್ದ ವಿದೇಶಿ ಪ್ರವಾಸಿಗರು ಈಗ ದಂಪತಿಗೆ ಚೆಕ್ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಇಂಗ್ಲೆಂಡ್ ನ ಪೀಟರ್ ಡೆವೆರಲ್ ಗಿಫ್ಟ್ ನೀಡಿದ ಪ್ರವಾಸಿ. ಕಳೆದ ವರ್ಷದ ನವೆಂಬರ್ 17ರಂದು ಪೀಟರ್ ಹಂಪಿಗೆ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆಯೊಂದರ ಫೋಟೋವನ್ನು ಪೀಟರ್ ಕ್ಲಿಕ್ಕಿಸಿದ್ದರು.
Advertisement
Advertisement
ಅಲ್ಲಿ ನಡೆಯುತ್ತಿದ್ದ ಮದುವೆಯ ಫೋಟೋ ತೆಗೆದ ನಂತರ ವಧು-ವರರ ಕುಟುಂಬಕ್ಕೆ ತೊಂದರೆಯಾಗಬಹುದು ಎಂದು ಸುಮ್ಮನಾಗಿದ್ದರಂತೆ. ಬಳಿಕ ಫೋಟೊ ಕ್ಲಿಕ್ಕಿಸಿ ತೊಂದರೆ ಮಾಡಿದ್ದಕ್ಕೆ ಪರಿಹಾರವಾಗಿ ಪೀಟರ್ ಗಿಫ್ಟ್ ನೀಡಿದ್ದಾರೆ.
Advertisement
ಪೀಟರ್ ವಧು-ವರರಿಗೆ 251 ಪೌಂಡ್ (ಅಂದಾಜು 22,376 ರೂ.), ಅರ್ಚಕರಿಗೆ 51 ಪೌಂಡ್ ಮತ್ತು ದೇವಸ್ಥಾನಕ್ಕೆ 11 ಪೌಂಡ್ ನ ಮೂರು ಚೆಕ್ ಕಳಿಹಿಸಿದ್ದಾರೆ. ದೇಶಿ ಸಂಪ್ರದಾಯದಂತೆ 1 ಶುಭ ಸಂಕೇತ, 5 ಶಿವನ ಪಂಚ ಮುಖ ಸೂಚಿಸುವ ಸಂಖ್ಯೆಯನ್ನೇ ಬಳಸಿ ಪೀಟರ್ ಗಿಫ್ಟ್ ಕಳುಹಿಸಿದ್ದಾರೆ. ಶಿವನಿಗೆ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ ಹಾಗ ಈಷಾನ ಎಂಬ ಪಂಚ ಮುಖ ಇದೆ. ದೇಶಿ ಸಂಪ್ರದಾಯ, ಮದುವೆ ಸಂಪ್ರದಾಯ ಹಾಗೂ ದೇವಸ್ಥಾನ ಸ್ಥಿತಿ ಗತಿಗಳ ಬಗ್ಗೆ ಪೀಟರ್ ಪತ್ರದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv