ಚಾಮರಾಜನಗರ: ಭರಚುಕ್ಕಿ ಜಲಪಾತದ ಹಿನ್ನೀರಿನಲ್ಲಿ ಪ್ರವಾಸಿಗರ ಹುಚ್ಚಾಟ ಜೋರಾಗಿದ್ದು, ಸಾವಿನ ದವಡೆಯಲ್ಲಿ ಮೋಜು-ಮಸ್ತಿ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರ ಗ್ರಾಮದ ವೆಸ್ಲಿ ಸೇತುವೆ ಕೆಳಗೆ ಹರಿಯುವ ಕಾವೇರಿ ನದಿಗೆ ಇಳಿದು ಪ್ರವಾಸಿಗರು ಜಲಕ್ರೀಡೆ ಆಡುತ್ತಿದ್ದಾರೆ. ಅಪಾಯದ ಮಟ್ಟದಲ್ಲಿ ಹರಿಯುವ ಕಾವೇರಿ ನದಿಯಲ್ಲಿ ಮೈಮರೆತ್ತಿದ್ದಾರೆ. ಇದನ್ನೂ ಓದಿ: ವರದಾ, ತುಂಗಭದ್ರಾ ನದಿಯಲ್ಲಿ ಹೆಚ್ಚಿದ ನೀರು – ಮೆಕ್ಕೆಜೋಳ ಸೇರಿ ವಿವಿಧ ಬೆಳೆ ಜಲಾವೃತ
Advertisement
Advertisement
ವೈನಾಡು ಮತ್ತು ಮಲೆನಾಡಿನ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುತ್ತಿದ್ದು, ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆ ಕಾವೇರಿ ನದಿಗೆ ಕಳೆದ ಆರು ದಿನಗಳಿಂದಲೂ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿಯ ಬೀಡುತ್ತಿದ್ದು, ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.
Advertisement
Advertisement
ನದಿಯಲ್ಲಿ ನೀರು ಹೆಚ್ಚಾಗಿರುವುದನ್ನು ತಿಳಿದ ಪ್ರವಾಸಿಗರು ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಣೆ ಮಾಡಲೂ ಒಂದು ವಾರದಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಈ ಬೆಳವಣಿಗೆಯಿಂದ ಎಚ್ಚೆತ್ತ ಜಿಲ್ಲಾಡಳಿತ ಜು.12 ರಂದು ಭರಚುಕ್ಕಿ ಜಲಪಾತ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ. ನದಿಯ ಬಳಿ ತೆರಳದಂತೆ ಮೇಲಿಂದ ಮೇಲೆ ಆದೇಶದ ಸುತ್ತೊಲೆ ಹೊರಡಿಸುತ್ತಿದೆ.
ವಿಪರ್ಯಾಸವೆಂದರೆ ಪ್ರವಾಸಿಗರು ಕಾವೇರಿ ನದಿಯಲ್ಲಿ ಇಳಿದು ಮನಬಂದಂತೆ ಆಟವಾಡುವುದು ಮತ್ತು ಈಜುವ ಹುಚ್ಚಾಟವನ್ನು ಮಾಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಇನ್ನಿತರ ಕಡೆಗಳಿಂದ ತಂಡೋಪ ತಂಡವಾಗಿ ಬಂದು ನದಿಗಿಳಿಯುತ್ತಿದ್ದಾರೆ. ಭರಚುಕ್ಕಿ ಪ್ರವೇಶಕ್ಕೆ ನಿರ್ಬಂಧವಿರುವುದ್ದರಿಂದ ವೆಸ್ಲಿ ಸೇತುವೆಯಿಂದ ಬಲಗಡೆಗೆ ತೆರಳುವ ಬೂದಗಟ್ಟದೊಡ್ಡಿ ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ನುಸುಳಿ ಭರಚುಕ್ಕಿ ಜಲಪಾತ ವೀಕ್ಷಣೆಗೆ ಮುಗಿ ಬೀಳುತ್ತಿದ್ದಾರೆ.
ಎಚ್ಚರ ತಪ್ಪಿದ್ರೆ ಶಿವನ ಪಾದ
ಭರಚುಕ್ಕಿ ವೀಕ್ಷಣೆಗೆ ಜಲಪಾತದ ತುದಿಗೆ ತೆರಳುತ್ತಿರುವ ಯುವಕ, ಯುವತಿಯರ ಗುಂಪು ತುತ್ತತುದಿಯಲ್ಲಿ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುವ ದುಸ್ಸಾಹಸ ಪ್ರಯತ್ನದಲ್ಲಿ ಮುಳುಗಿದ್ದಾರೆ. ಯುವಕ, ಯುವತಿಯರು, ವಯೋವೃದ್ಧರು, ಮಹಿಳೆಯರು, ಸಣ್ಣ-ಸಣ್ಣ ಮಕ್ಕಳು ಸೇರಿ ಜಲಪಾತ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಈ ಚುನಾವಣೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಿರ್ಧರಿಸುತ್ತೆ: ಯಶವಂತ್ ಸಿನ್ಹಾ
ಇವೆಲ್ಲವನ್ನು ನೋಡಿದ ಪ್ರಜ್ಞಾವಂತರು ಎಲ್ಲಿಂದಲು ಇಲ್ಲಿನ ನದಿ, ಜಲಪಾತ ವೀಕ್ಷಣೆಗೆ ಬಂದು ಸಾವು-ನೋವುಗಳು ಸಂಭವಿಸಲು ಕಾರಣವಾಗುತ್ತಿರುವ ಪ್ರವಾಸಿಗರಿಗೆ ಕಡಿವಾಣ ಹಾಕಬೇಕು. ಅಕ್ರಮವಾಗಿ ತೆರಳಿ ಜಲಪಾತ ವೀಕ್ಷಣೆ ಮಾಡುವ ದಾರಿಯನ್ನು ಬಂದ್ ಮಾಡಿ ಪೊಲೀಸರ ನಿಯೋಜನೆ ಮಾಡಬೇಕು. ನದಿಯ ಬಳಿ ಯಾರು ಸುಳಿಯದಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.