ಉಡುಪಿ: ತ್ರಾಸಿ ಬೀಚ್‌ನಲ್ಲಿ (Trasi Beach) ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆಯಾಗಿರುವ ಘಟನೆ ಉಡುಪಿಯಲ್ಲಿ (Udupi) ನಡೆದಿದೆ.
ಉತ್ತರ ಕನ್ನಡ ಮೂಲದ ಜಟ್ಸ್ಕೀ ಬೋಟ್ ರೈಡರ್ ರವಿದಾಸ್ ಕಣ್ಮರೆಯಾಗಿದ್ದು, ಶೋಧಕಾರ್ಯ ನಡೆಯುತ್ತಿದೆ. ಬೋಟ್‌ನಲ್ಲಿದ್ದ ಬೆಂಗಳೂರಿನ ಪ್ರವಾಸಿಗ ಪ್ರಶಾಂತ್ ಬಚಾವ್ ಆಗಿದ್ದಾನೆ. ಲೈಫ್ ಜಾಕೆಟ್ ತೊಟ್ಟಿದ್ದ ಪ್ರಶಾಂತ್ ಪಾರಾಗಿದ್ದಾನೆ.
Advertisement
Advertisement
ಗಂಗೊಳ್ಳಿ ಪೊಲೀಸ್, ಕರಾವಳಿ ಪೊಲೀಸ್ ಪಡೆ, ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ. ಉಡುಪಿಯ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.