– ಇದು 140 ಕೋಟಿ ಜನರ ಮನದಾಸೆ ಎಂದ ಅಮಿತ್ ಶಾ
ನವದೆಹಲಿ: ದೆಹಲಿಯಲ್ಲಿಂದು ನಡೆದ ಎನ್‌ಡಿಎ ಸಂಸದರ (NDA MPs) ಸಭೆಯಲ್ಲಿ ಚಂದ್ರಬಾಬು ನಾಯ್ಡು, ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಹೆಚ್.ಡಿ ಕುಮಾರಸ್ವಾಮಿ, ಪವನ್ ಕಲ್ಯಾಣ್, ಚಿರಾಗ್ ಪಾಸ್ವಾನ್, ಅಜಿತ್ ಪವಾರ್, ನಿತೀಶ್ ಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ (Narendra Modi) ಅವರ ಹೆಸರನ್ನು ಅನುಮೋದಿಸಿದರು. ಇದೇ ವೇಳೆ ನೂತನ ಸಂಸದರಿಗೆ ಅಭಿನಂದಿಸಿದ ನಾಯಕರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಯಾರು ಏನು ಹೇಳಿದರು ಎಂಬುದನ್ನಿಲ್ಲಿ ತಿಳಿಯಬಹುದು.
Advertisement
ಅಮಿತ್ ಶಾ:
ಮೋದಿ ಪ್ರಧಾನಿ ಆಗಬೇಕು ಎನ್ನುವುದು 140 ಕೋಟಿ ಜನರ ಬಯಕೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರ ಮನದ ಆಸೆ. ಕಳೆದ 10 ವರ್ಷಗಳಲ್ಲಿ ಮೋದಿ ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ಸಿಕ್ಕಿದೆ. ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿಯಾಗಿದೆ. ದೇಶ ಮಾತ್ರವಲ್ಲ ವಿಶ್ವದಲ್ಲಿ ಅವರ ಕಾರ್ಯಗಳಿಂದ ಪ್ರಭಾವಿತಗೊಳಿಸಿದ್ದಾರೆ. ಮುಂದಿನ 5 ವರ್ಷದಲ್ಲಿ ಭಾರತ ವಿಶ್ವದ ಬಲಿಷ್ಠ ದೇಶವಾಗಲಿದೆ.
Advertisement
ಹೆಚ್.ಡಿ ಕುಮಾರಸ್ವಾಮಿ:
ಮೋದಿ ಅವರ ಹೆಸರನ್ನು ಅನುಮೋದಿಸಿದ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ನಾನು ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದರು.
Advertisement
ಚಂದ್ರಬಾಬು ನಾಯ್ಡು:
ಮೋದಿ 3 ತಿಂಗಳಿಂದ ವಿಶ್ರಾಂತಿ ಪಡೆದಿಲ್ಲ. ಅದೇ ಉತ್ಸಾಹದಲ್ಲಿ ಆಂಧ್ರಪ್ರದೇಶದಲ್ಲೂ ಪ್ರಚಾರ ಮಾಡಿದರು. ಅದರ ಪರಿಣಾಮ ಆಂಧ್ರಪ್ರದೇಶದ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಯಾಗಿದೆ. ಅಮಿತ್ ಶಾ, ರಾಜನಾಥ್ ಸಿಂಗ್, ನಡ್ಡಾ, ಗಡ್ಕರಿ ಎಲ್ಲರೂ ನಮ್ಮ ಜೊತೆಗೆ ಇದ್ದಾರೆ ಎನ್ನುವ ಸಂದೇಶ ನೀಡಿದ್ದಾರೆ. ಈ ಕಾರಣದಿಂದಾಗಿ ನಾವು ಇಲ್ಲಿದ್ದೇವೆ. ಕಳೆದ ಹತ್ತು ವರ್ಷದಲ್ಲಿ ಮೋದಿ ಮಹತ್ವದ ಕಾರ್ಯ ಮಾಡಿದ್ದಾರೆ. ಮೈಲುಗಲ್ಲು, ಬದಲಾವಣೆಗೆ ದೇಶ ಸಾಕ್ಷಿಯಾಗಿದೆ. ದೇಶವೂ ವಿಶ್ವದಲ್ಲಿ ಶಕ್ತಿ ಕೇಂದ್ರವಾಗಿ ಬದಲಾಗಿದೆ. ಮೇಕ್ ಇನ್ ಇಂಡಿಯಾ ನಮ್ಮ ಹೆಮ್ಮೆ, ಈಗ 5ನೇ ಬಲಿಷ್ಠ ಆರ್ಥಿಕತೆಯ ಶಕ್ತಿಯಾಗಿ ಭಾರತ ಹೊರಹೊಮ್ಮಿದೆ. ಮುಂದಿನ ಅವಧಿಯಲ್ಲಿ 3ನೇ ಸ್ಥಾನಕ್ಕೆ ಏರಲಿದೆ. ದೇಶ ಮತ್ತಷ್ಟು ಅಭಿವೃದ್ಧಿಯಾಗಹುವ ನಂಬಿಕೆ ನನಗಿದೆ ಎಂದು.
Advertisement
ನಿತೀಶ್ ಕುಮಾರ್:
ಬೆಳೆಯುತ್ತಿರುವ ಭಾರತಕ್ಕೆ ಮೋದಿಯಂತಹ ಉತ್ತಮ ನಾಯಕ ಮತ್ತೆ ಸಿಗೋದಿಲ್ಲ. ಇದು ನಮಗೆ ಉತ್ತಮ ಅವಕಾಶ. ಈಗ ಕಳೆದು ಕೊಂಡರೆ ಮತ್ತೆ ಸಿಗುವುದಿಲ್ಲ. ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಹೆಸರಿಗೆ ಜೆಡಿಯು ಅನುಮೋದಿಸುತ್ತದೆ. ಈಗಾಗಲೇ ಮೋದಿ ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅಲ್ಲಿ ಇಲ್ಲಿ ನಿಂತು ಗೆದ್ದ ಕೆಲವರು ಮುಂದಿನ ಬಾರಿ ಸೋಲುತ್ತಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ. ಬಿಹಾರವನ್ನೂ ಅಭಿವೃದ್ಧಿ ಮಾಡಲಿದ್ದಾರೆ, ಅದಕ್ಕಾಗಿ ನಾವು ಎಲ್ಲ ಬೆಂಬಲ ನೀಡಿದ್ದೇವೆ.
ಅಜಿತ್ ಪವಾರ್:
ಪ್ರಧಾನಿಮಂತ್ರಿಯಾಗಿ ಮೋದಿ ಹೆಸರನ್ನು ಅನುಮೋದಿಸಿದ ಅಜಿತ್ ಪವಾರ್, ಎನ್‌ಸಿಪಿ ಪಕ್ಷದಿಂದ ಮೋದಿ ಹೆಸರನ್ನು ಅನುಮೋದಿಸತ್ತೇವೆ. 3ನೇ ಬಾರಿಗೆ ಎನ್‌ಡಿಎಗೆ ಗೆಲುವು ಸಿಗುವುದು ಸಾಮಾನ್ಯವಲ್ಲ. ಮೋದಿ ಅವರ ಮೇಲೆ ಜನರಿಗೆ ವಿಶ್ವಾಸವಿದೆ. ಶ್ರೀಮಂತ ಬಡವರ ಬಡವರು ನಡುವೆ ಅಂತರ ತೆಗೆಯಲು, ವಿಕಸತ್ ಭಾರತ್ ಮಾಡುವ ಗುರಿ ಮೋದಿ ಅವರಿಂದ ಮಾತ್ರ ಸಾಧ್ಯ. ಈ ಕಾರಣಕ್ಕೆ ನಾವು ಅವರನ್ನು ಬೆಂಬಲಿಸುತ್ತೇವೆ ಎಂದರು.