Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
ಬೀಜಿಂಗ್: ದೇಶದ ಆರ್ಥಿಕ ಸ್ಥಿತಿಯನ್ನು ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿದ್ದಕ್ಕೆ ಚೀನಾ ಸರ್ಕಾರ (China Government) ಪ್ರಮುಖ ಹಣಕಾಸು ಪತ್ರಕರ್ತನನ್ನು ಸಾಮಾಜಿಕ ಜಾಲತಾಣದಿಂದಲೇ (Social Media) ನಿಷೇಧಿಸಿದೆ.
ಪ್ರಭಾವಿ ಪತ್ರಕರ್ತ Wu Xiaobo ಅವರನ್ನು ಟ್ವಿಟ್ಟರ್ ರೀತಿಯ Weibo ವೇದಿಕೆಯಲ್ಲಿ ಬ್ಲಾಕ್ ಮಾಡಲಾಗಿದೆ. ಆ ಖಾತೆಯನ್ನು ತೆರೆದಾಗ ಸಂಬಂಧಿತ ಕಾನೂನನ್ನು ಉಲ್ಲಂಘಿಸಿದ್ದಕ್ಕೆ ಆ ಖಾತೆಯನ್ನು ನಿಷೇಧಿಸಲಾಗಿದೆ ಎಂಬ ಸಂದೇಶ ಕಾಣುತ್ತದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕೊನೆಯ ಭಾರತದ ಪತ್ರಕರ್ತನಿಗೆ ದೇಶ ತೊರೆಯುವಂತೆ ಸೂಚಿಸಿದ ಚೀನಾ
ಸುಮಾರು 47 ಲಕ್ಷ ಫಾಲೋವರ್ಸ್ ಹೊಂದಿದ್ದ Wu Xiaobo ಅವರು ನಿರುದ್ಯೋಗ (Unemployment) ಸಮಸ್ಯೆಯನ್ನು ಉಲ್ಲೇಖಿಸಿ ಚೀನಾದ ನಿರಂಕುಶ ಆಡಳಿತವನ್ನು 1930 ರ ದಶಕದ ಮಹಾ ಆರ್ಥಿಕ ಕುಸಿತಕ್ಕೆ ಹೋಲಿಸಿ ಅಂಕಣ ಬರೆದಿದ್ದರು. ಸರ್ಕಾರವನ್ನು ಟೀಕಿಸಿದ್ದಕ್ಕೆ ಈಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ.
ಅಂಕಿಅಂಶಗಳ ಪ್ರಕಾರ16 ರಿಂದ 24 ವರ್ಷ ವಯಸ್ಸಿನ ಯುವಜನರಲ್ಲಿ ನಿರುದ್ಯೋಗ ಪ್ರಮಾಣ ದರವು ಮೇ ತಿಂಗಳಲ್ಲಿ ದಾಖಲೆಯ ಗರಿಷ್ಠ 20.8% ಏರಿಕೆಯಾಗಿದೆ. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ
ಉದ್ಯೋಗಗಳ ಕೊರತೆಯಿಂದಾಗಿ (Job Crisis) ಚೀನೀ ಪದವೀಧರರು ತಾವು ಕುರ್ಚಿಯ ಮೇಲೆ ಕುಸಿದು ಬಿದ್ದಿರುವ, ಪದವಿ ಗೌನ್‌ಗಳನ್ನು ಧರಿಸಿ ನೆಲದ ಮೇಲೆ ಬಿದ್ದಿರುವ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಬಹಿರಂಗವಾಗಿ ಪ್ರತಿಭಟನೆ ನಡೆಸಲು ಸಾಧ್ಯವಾಗದ ಕಾರಣ ಮೌನ ಪ್ರತಿಭಟನೆಯ ಭಾಗವಾಗಿ “ಬದುಕಿಯೂ ಸತ್ತಿದ್ದೇವೆ” ಎಂಬ ಸಂದೇಶ ಬರೆದು ವಿದ್ಯಾರ್ಥಿಗಳು ಶವಗಳಂತೆ ಪೋಸ್ ನೀಡುತ್ತಿದ್ದಾರೆ ಎಂದು ವರದಿಯಾಗಿದೆ.