ನವದೆಹಲಿ: ‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಪರಾಕ್ರಮ ತೋರಿದ ಬ್ರಹ್ಮೋಸ್ (BrahMos Missile) ಸೂಪರ್‌ಸಾನಿಕ್ ಕ್ಷಿಪಣಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಭಾರತದ ಕ್ಷಿಪಣಿ ಖರೀದಿಗೆ ಜಗತ್ತಿನ ಹಲವು ರಾಷ್ಟ್ರಗಳು ಮುಂದಾಗಿವೆ.
ಕಾರ್ಯಾಚರಣೆಯ ಸಮಯದಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯನ್ನು ಬಳಸಿದ್ದಾರೆಂದು ವರದಿಯಾಗಿದೆ. ಇದು ಈಗ ಜಾಗತಿಕ ಗಮನ ಸೆಳೆದಿದೆ. ಏಷ್ಯಾ, ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ರಾಷ್ಟ್ರಗಳು ಪ್ರಬಲ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ತೋರಿವೆ. ಇದನ್ನೂ ಓದಿ: ಪಾಕಿಸ್ತಾನ ಪರ ಬೇಹುಗಾರಿಕೆ – ಭಾರತದ ಯೂಟ್ಯೂಬರ್ ಬಂಧನ
ಯಾವ್ಯಾವ ರಾಷ್ಟ್ರಗಳಿಂದ ಬೇಡಿಕೆ?
ಈಜಿಪ್ಟ್, ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ, ಚಿಲಿ, ಅರ್ಜೆಂಟೀನಾ, ವೆನೆಜುವೆಲಾ, ಫಿಲಿಪೈನ್ಸ್, ಥೈಲ್ಯಾಂಡ್, ಸಿಂಗಾಪುರ, ಬ್ರುನಿ ಬ್ರೆಜಿಲ್, ಸೌದಿ ಅರೇಬಿಯಾ, ಯುಎಇ, ಕತಾರ್, ಒಮನ್ ದೇಶಗಳಿಂದ ಬ್ರಹ್ಮೋಸ್‌ಗೆ ಬೇಡಿಕೆ ಬಂದಿದೆ ಎನ್ನಲಾಗಿದೆ.
ಭಾರತವು 2025 ರ ಏಪ್ರಿಲ್‌ನಲ್ಲಿ 375 ಮಿಲಿಯನ್ ಡಾಲರ್ ಒಪ್ಪಂದದಡಿಯಲ್ಲಿ ಫಿಲಿಪೈನ್ಸ್‌ಗೆ ಎರಡನೇ ಬ್ಯಾಚ್ ಬ್ರಹ್ಮೋಸ್ ಕ್ಷಿಪಣಿಗಳನ್ನು ಕಳುಹಿಸಿತು. ಇದು ಭಾರತದ ಮೊದಲ ಪ್ರಮುಖ ಕ್ಷಿಪಣಿ ರಫ್ತು ಎಂದು ಗುರುತಿಸಲಾಯಿತು. ವಿಶ್ವಾಸಾರ್ಹ ದೀರ್ಘ-ಶ್ರೇಣಿಯ ಫೈರ್‌ಪವರ್‌ಗಾಗಿ ಹುಡುಕುತ್ತಿರುವ ಜಾಗತಿಕ ಖರೀದಿದಾರರಿಗೆ ಬಾಗಿಲು ತೆರೆದಿದೆ. ಇದನ್ನೂ ಓದಿ: ಮತ್ಸ್ಯ 6000 – ಆಳ ಸಮುದ್ರದ ರಹಸ್ಯಗಳನ್ನು ಭೇದಿಸಲು ಭಾರತ ಸಜ್ಜು
ವಿಯೆಟ್ನಾಂ ತನ್ನ ನೌಕಾ ರಕ್ಷಣೆಯನ್ನು ಬಲಪಡಿಸಲು ಬ್ರಹ್ಮೋಸ್‌ಗೆ 700 ಮಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಮಲೇಷ್ಯಾ ಕ್ಷಿಪಣಿಯನ್ನು ಎಸ್‌ಯು -30 ಜೆಟ್‌ಗಳು ಮತ್ತು ಕೆಡಾ-ಕ್ಲಾಸ್ ಯುದ್ಧನೌಕೆಗಳಲ್ಲಿ ಸಜ್ಜುಗೊಳಿಸಬಹುದು. ಎರಡೂ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಬೆದರಿಕೆಗಳನ್ನು ಎದುರಿಸುವ ಗುರಿಯನ್ನು ಹೊಂದಿವೆ.
ಬ್ರಹ್ಮೋಸ್ ಕ್ಷಿಪಣಿ ದೀರ್ಘ ಶ್ರೇಣಿಯ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ. ಇದನ್ನು ಭಾರತದ ಡಿಆರ್‌ಡಿಒ ಮತ್ತು ರಷ್ಯಾದ ಎನ್‌ಪಿಒಎಂ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಕ್ಷಿಪಣಿಯನ್ನು ಜಲಾಂತರ್ಗಾಮಿ ನೌಕೆಗಳು, ಹಡಗು, ವಿಮಾನಗಳು ಮತ್ತು ಭೂಮಿಯಿಂದ ಉಡಾಯಿಸಬಹುದು. ಇದು 2.8 ಮ್ಯಾಕ್ (ಶಬ್ದದ 3 ಪಟ್ಟು ವೇಗ) ವೇಗದಲ್ಲಿ ಹಾರುತ್ತದೆ. ಇದನ್ನೂ ಓದಿ: ಪಾಕ್ ಪ್ರಧಾನಿ ನಿದ್ದೆಗೆಡಿಸಿದ ʻಆಪರೇಷನ್ ಸಿಂಧೂರʼ – ಶೆಹಬಾಜ್‌ಗೆ ಮಧ್ಯರಾತ್ರಿ ಕರೆ ಮಾಡಿದ್ಯಾರು?