ನಟ ಡಾಲಿ ಧನಂಜಯ್ ಅದ್ಧೂರಿ ಮದುವೆಗೆ (Dhananjay Wedding) ಅದ್ಧೂರಿ ವೇದಿಕೆ ಸಜ್ಜಾಗಿದೆ. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಮದುವೆ ಸಮಾರಂಭ ಜೋರಾಗಿ ನಡೆಯುತ್ತಿದೆ.
ಇಂದು (ಫೆಬ್ರವರಿ 15) ಧನಂಜಯ್ ಮದುವೆಯ ಆರತಕ್ಷತೆ (Daali Dhananjaya Reception) ನಡೆಯುತ್ತಿದ್ದು, ನಾಳೆ (ಫೆಬ್ರವರಿ 15) ಮದುವೆ ನಡೆಯಲಿದೆ. ಈಗಾಗಲೇ ಆರತಕ್ಷತೆಗೆ ದೇಶ ವಿದೇಶದಿಂದ ಧನಂಜಯ್ ಸ್ನೇಹಿತರು ಆತ್ಮೀಯರು ಆಗಮಿಸುತ್ತಿದ್ದಾರೆ. ನಟನ ಮದುವೆಗೆ ರಾಜಕೀಯ ಗಣ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳ ದಂಡೇ ಆಗಮಿಸಿದೆ.
ಸೆಲೆಬ್ರಿಟಿಗಳ ದಂಡು:
ಸ್ಯಾಂಡಲ್‌ವುಡ್ ತಾರೆಯರಾದ ಸಪ್ತಮಿ ಗೌಡ, ಅಜಯ್ ರಾವ್, ನೀನಾಸಂ ಸತೀಶ್, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಬೈಟ್, ಅವಿನಾಶ್, ಮಾಳವಿಕ ಅವಿನಾಶ್, ನಟ ಉಪೇಂದ್ರ, ಅರುಣ್ ಸಾಗರ್, ಶ್ರೀಮುರಳಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ, ಶ್ರದ್ಧಾ ಶ್ರೀನಾಥ್, ಶೃತಿ ಹರಿಹರನ್, ನಿಧಿ ಸುಬ್ಬಯ್ಯ ಆಗಮಿಸಿದ್ದಾರೆ. ಅಲ್ಲದೇ ರಾಜಕೀಯ ಗಣ್ಯರ ಪೈಕಿ ಸಚಿವ ಜಮೀರ್ ಅಹ್ಮದ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಶಾಸಕ ಶಿವಲಿಂಗೇಗೌಡ, ಸಚಿವ ಜಮೀರ್ ಅಹ್ಮದ್, ಕೇಂದ್ರ ಸಚಿವ ವಿ. ಸೋಮಣ್ಣ ಶಾಸಕ ಪ್ರದೀಪ್ ಈಶ್ವರ್, ಬಿ.ವೈ ವಿಜಯೇಂದ್ರ, ಸಂಸದ ಯದುವೀರ್ ಆಗಮಿಸಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನವಜೋಡಿಗೆ ಶುಭಹಾರೈಸಿದ್ದಾರೆ.
ʻಪುಷ್ಪʼ ಸಿನಿಮಾ ನಿರ್ದೇಶಕ ಸುಕುಮಾರ್ ಭಾಗಿ:
ವಿಶೇಷವೆಂದರೆ ಟಾಲಿವುಡ್‌ನ ಖ್ಯಾತ ಸಿನಿಮಾ ಬರಹಗಾರ, ‘ಪುಷ್ಪ’ ಚಿತ್ರದ ನಿರ್ದೇಶಕ ಸುಕುಮಾರ್ ಅವರು ಡಾಲಿ ಮದುವೆಗಾಗಿ ಮೈಸೂರಿಗೆ ಆಗಮಿಸಿದ್ದಾರೆ. ಆರತಕ್ಷತೆಗೂ ಮುನ್ನ ಖಾಸಗಿ ಹೋಟೆಲ್‌ನಲ್ಲಿ ಧನಂಜಯ್ ಅವರನ್ನ ಭೇಟಿಯಾದರು. ಬಳಿಕ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡರು. ಭಾನುವಾರ ಸುಕುಮಾರ್ ಅವರು ಡಾಲಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.
ಪುಷ್ಪ-1, ಪುಷ್ಪ-2 ಸಿನಿಮಾದಲ್ಲಿ ಧನಂಜಯ್ ಅವರು ಜಾಲಿ ರೆಡ್ಡಿ ಪಾತ್ರದಲ್ಲಿ ಅಭಿನಯಿಸಿದ್ದರು. ಈ ತಿಂಗಳು ಆರಂಭದಲ್ಲಿ ಧನಂಜಯ್ ಹೈದರಾಬಾದ್‌ಗೆ ತೆರಳಿ ಪುಷ್ಪ ಚಿತ್ರತಂಡವನ್ನು ಮದುವೆಗೆ ಆಹ್ವಾನಿಸಿದ್ದರು.
ಡಾಲಿ ಧನಂಜಯ್ ಮದುವೆ ಸಮಾರಂಭಕ್ಕೆ ಬುಧವಾರ 20,000ಕ್ಕೂ ಅಧಿಕ ಮಂದಿ ಆಗಮಿಸುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲಿ ಮದುವೆ ನಡೆಯುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆಯಿದೆ. ಹಾಗೇ ಇನ್ನೂ ಹೆಚ್ಚಿನ ಸೆಲೆಬ್ರಿಟಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಮಠಾಧೀಶರು ಡಾಲಿ ಮದುವೆ ಆಗಮಿಸಲಿದ್ದಾರೆ.