– ಹಾಲಿ ಚಾಂಪಿಯನ್ ಇಂಗ್ಲೆಂಡ್ ಟ್ರೋಫಿಯಿಂದ ಹೊರಗುಳಿಯುತ್ತಾ?
ನವದೆಹಲಿ: ಈ ಬಾರಿಯ ಏಕದಿನ ವಿಶ್ವಕಪ್‌ನ (World Cup 2023) ಲೀಗ್ ಹಂತದಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು 2025 ರ ಚಾಂಪಿಯನ್ಸ್ ಟ್ರೋಫಿಗೆ (2025 Champions Trophy) ಅರ್ಹತೆ ಪಡೆಯಲಿವೆ ಎಂದು ಐಸಿಸಿ ತಿಳಿಸಿದೆ.
- Advertisement -
2025 ರ ಚಾಂಪಿಯನ್ಸ್ ಟ್ರೋಫಿ ಆತಿಥ್ಯವನ್ನು ಪಾಕಿಸ್ತಾನ (Pakistan) ವಹಿಸಲಿದೆ. ಹೀಗಾಗಿ ಟ್ರೋಫಿಗೆ ಪಾಕಿಸ್ತಾನ ನೇರ ಪ್ರವೇಶ ಪಡೆಯಲಿದೆ. ಭಾರತದಲ್ಲಿ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 7 ಸ್ಥಾನ ಪಡೆಯುವ ತಂಡಗಳು ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಪಡೆಯಲಿವೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಜಯ – 20 ವರ್ಷಗಳ ಬಳಿಕ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತ
- Advertisement -
- Advertisement -
ಒಂದು ವೇಳೆ ಈ ಟೂರ್ನಿಯಲ್ಲಿ ಪಾಕಿಸ್ತಾನ ಅಗ್ರ 7 ತಂಡಗಳ ಸಾಲಿನಲ್ಲಿ ಸ್ಥಾನ ಪಡೆದರೆ, ಆಗ 8 ನೇ ಸ್ಥಾನ ಗಳಿಸುವ ತಂಡಕ್ಕೂ ಟ್ರೋಫಿಗೆ ಅರ್ಹತೆ ಸಿಗಲಿದೆ. 2025 ಚಾಂಪಿಯನ್ಸ್ ಟ್ರೋಫಿಗೆ ಅರ್ಹತಾ ಮಾದರಿಯನ್ನು 2021 ರಲ್ಲೇ ICC ಮಂಡಳಿಯು ಅನುಮೋದಿಸಿತ್ತು. ಆದರೆ ಹಲವು ತಂಡಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ.
- Advertisement -
ಟ್ರೋಫಿಯಿಂದ ಹೊರಗುಳಿಯುತ್ತಾ ಇಂಗ್ಲೆಂಡ್?
ವಿಶ್ವಕಪ್‌ನ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಈ ಬಾರಿಯ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಅಗ್ರ ಏಳು ತಂಡಗಳಲ್ಲಿ ಸ್ಥಾನ ಪಡೆಯಲು ವಿಫಲವಾದರೆ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯುವ ಅಪಾಯವಿದೆ. ಇದನ್ನೂ ಓದಿ: ಡಚ್ಚರ ವಿರುದ್ಧ ಬಾಂಗ್ಲಾಕ್ಕೆ ಹೀನಾಯ ಸೋಲು – ತನ್ನ ಶೂನಿಂದ ತಾನೇ ಹೊಡೆದುಕೊಂಡ ಅಭಿಮಾನಿ
2025 ರ ಚಾಂಪಿಯನ್ಸ್ ಟ್ರೋಫಿಯ ಅರ್ಹತಾ ವಿಧಾನವು ಪ್ರಪಂಚದಾದ್ಯಂತದ ಅನೇಕ ಕ್ರಿಕೆಟ್ ಮಂಡಳಿಗಳ ಅಚ್ಚರಿಗೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾದ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳು ತಮ್ಮ ಸ್ಥಾನಕ್ಕಾಗಿ ಹೋರಾಡಲು ಸಾಧ್ಯವಾಗುತ್ತದೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿಶ್ವಕಪ್ ಲೀಗ್ ಹಂತದ ಅಗ್ರ 7 ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದರೆ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯಂತಹ ಪೂರ್ಣ ಸದಸ್ಯ ರಾಷ್ಟ್ರಗಳ ಭವಿಷ್ಯವು ಪಂದ್ಯಾವಳಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
Web Stories