ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ನಿರ್ಮಿಸಿದ್ದು ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ವರ್ಷ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ. ಇದನ್ನೂ ಓದಿ:ಕಲಾ ವಿಭಾಗದಲ್ಲಿ ಬಳ್ಳಾರಿಯ ಕುಸುಮ ಫಸ್ಟ್ – ಇಂದೂ ಕಾಲೇಜಿನ 9 ಮಂದಿ ಟಾಪರ್
Advertisement
Advertisement
ದ್ವಿತಿಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಎನ್ಸಿಲ್ಲಾ ಡಿಸೋಜಾ ಅವರು 596 ಅಂಕ ಪಡೆದು ಮೊದಲ ಸ್ಥಾನಗಳಿಸಿದ್ದಾರೆ. ಇದನ್ನೂ ಓದಿ:ವಿಜ್ಞಾನ ವಿಭಾಗದಲ್ಲಿ ಬೆಂಗ್ಳೂರಿನ ರಜತ್ ಫಸ್ಟ್ – ಟಾಪ್ 10 ಪಟ್ಟಿ ಇಲ್ಲಿದೆ
Advertisement
ಟಾಪ್ 10 ಪಟ್ಟಿಯಲ್ಲಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು
Advertisement
1. ಹೆಸರು: ಒಲ್ವಿಟಾ ಎನ್ಸಿಲ್ಲಾ ಡಿಸೋಜಾ
ಕಾಲೇಜು: ಆಳ್ವಾಸ್ ಪಿಯು ಕಾಲೇಜು, ಮೂಡಬಿದ್ರೆ, ದಕ್ಷಿಣ ಕನ್ನಡ
ಪಡೆದ ಅಂಕ: 596
2. ಹೆಸರು: ಶ್ರೀಕೃಷ್ಣ ಶರ್ಮಾ ಕೆ
ಕಾಲೇಜು: ಸತ್ಯಸಾಯಿ ಪಿಯು ಕಾಲೇಜು, ಅಳಿಕೆ ಸತ್ಯಸಾಯಿ ವಿಹಾರ್ ದ.ಕ
ಪಡೆದ ಅಂಕ: 596
3. ಹೆಸರು: ಶ್ರೇಯಾ ಶೆಣೈ
ಕಾಲೇಜು: ಕೆನರಾ ಪಿಯು ಕಾಲೇಜು, ಕೊಡಿಯಲ್‍ಬೈಲ್, ಮಂಗಳೂರು
ಪಡೆದ ಅಂಕ: 595
4. ಹೆಸರು: ಸ್ವಸ್ತಿಕ್ ಪಿ
ಕಾಲೇಜು: ಸಂತ ಫಿಲೋಮಿನಾ ಪಿಯು ಕಾಲೇಜು, ಪುತ್ತೂರು
ಪಡೆದ ಅಂಕ: 594
5. ಹೆಸರು: ಗೌತಮ್ ರಾಥಿ
ಕಾಲೇಜು: ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
ಪಡೆದ ಅಂಕ: 594
6. ಹೆಸರು: ವೈಷ್ಣವಿ ಕೆ
ಕಾಲೇಜು: ಎಸ್. ಕದಂಬಿ ಪಿಯು ಕಾಲೇಜು, ಬಸವೇಶ್ವರನಗರ, ಬೆಂಗಳೂರು
ಪಡೆದ ಅಂಕ: 594
7. ಹೆಸರು: ಪ್ರಜ್ಞಾ ಸತೀಶ್
ಕಾಲೇಜು: ವಿದ್ಯಾವಾಹಿನಿ ಪಿಯು ಕಾಲೇಜು, ತುಮಕೂರು
ಪಡೆದ ಅಂಕ: 594
8. ಹೆಸರು: ಭೀಮಿ ರೆಡ್ಡಿ ಸಂದೀಪ್ ರೆಡ್ಡಿ
ಕಾಲೇಜು: ಜೈನ್ ಪಿಯು ಕಾಲೇಜು, ಬೆಂಗಳೂರು
ಪಡೆದ ಅಂಕ: 594
9. ಹೆಸರು: ಪ್ರಣವ್.ಎಸ್. ಶಾಸ್ತ್ರಿ
ಕಾಲೇಜು: ಕ್ರೈಸ್ಟ್ ಪಿಯು ಕಾಲೇಜು, ಬೆಂಗಳೂರು
ಪಡೆದ ಅಂಕ: 594
10. ಹೆಸರು: ಶ್ರಾವಂತಿ ಜಯಪಾಲ್
ಕಾಲೇಜು: ಎಸ್.ಬಿ ಮಹಾವೀರ್ ಜೈನ್ ಕಾಲೇಜು, ಬೆಂಗಳೂರು
ಪಡೆದ ಅಂಕ: 594