-ಅಪ್ಪ ಹೇಳಿದ್ದೊಂದು, ಮಕ್ಕಳು ಮಾಡಿದ್ದು ಇನ್ನೊಂದು
ನವದೆಹಲಿ: ಹಿಂದಿನ ಕಾಲದಲ್ಲಿ ಹಲ್ಲನ್ನು ಶುಚಿಗೊಳಿಸಲು ಬೇವಿನ ಕಡ್ಡಿ, ಇದ್ದಿಲು, ಕುರುಳುಗಳನ್ನು ಬಳಸುತ್ತಿದ್ದರು. ಆಧುನಿಕತೆ ಜೀವನಕ್ಕೆ ಒಗ್ಗಿಕೊಂಡಿರುವ ನಾವು ಟೂತ್ ಬ್ರಶ್ ಬಳಸಿ ಹಲ್ಲುಗಳನ್ನು ಶುಚಿಗೊಳಿಸಿಕೊಳ್ಳುತ್ತೇವೆ. ಯುವಕರಿಬ್ಬರು ಹಲ್ಲುಗಳನ್ನು ಶುಚಿಗೊಳಿಸುವಾಗ ಬ್ರಶ್ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವಕರಿಬ್ಬರ ಅನ್ನನಾಳದಲ್ಲಿ ಬ್ರಶ್ ಸಿಲುಕಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಉತ್ತರ ಪ್ರದೇಶದ ಆಗ್ರಾದ ನಿವಾಸಿ ಗೌರವ್ ಎಂಬ ಯುವಕನನ್ನು ಅಕ್ಟೋಬರ್ ನಲ್ಲಿ ಮತ್ತು ದೆಹಲಿಯ ಆಬಿದ್ ಎಂಬಾತನನ್ನು ಡಿಸೆಂಬರ್ ನಲ್ಲಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದಾಗ ಇಬ್ಬರು ಒಂದೇ ಸಮಸ್ಯೆಯಿಂದ ಬಳಲುತ್ತಿದ್ದರು. ಸ್ಕ್ಯಾನ್ ಮಾಡಿ ನೋಡಿದಾಗ ಅನ್ನನಾಳದಲ್ಲಿ ಟೂತ್ ಬ್ರಶ್ ಸಿಲುಕಿಕೊಂಡಿರೋದು ಪತ್ತೆಯಾಗಿದೆ.
Advertisement
Advertisement
ಯುವಕರಿಬ್ಬರು ಆಸ್ಪತ್ರೆಗೆ ದಾಖಲಾದಾಗ ನೋವಿನಿಂದ ಅಳುತ್ತಿದ್ದರು. ನೀರು ಕುಡಿಯುವ ಪರಿಸ್ಥಿತಿಯಲ್ಲಿಯೂ ಇರಲಿಲ್ಲ. ಸ್ಕ್ಯಾನಿಂಗ್ ವರದಿ ಬಂದ ಕೂಡಲೇ ಎಂಡೋಸ್ಕೋಪಿ ಮೂಲಕ ಬ್ರಶ್ ತೆಗೆಯಲು ಪ್ರಯತ್ನಿಸಲಾಯ್ತು. ಅನ್ನನಾಳದಲ್ಲಿ ಅಡ್ಡಾದಿಡ್ಡಿಯಾಗಿ ಬ್ರಶ್ ಕೂತಿದ್ದರಿಂದ ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡಿತು. ಕೊನೆಗೆ ನುರಿತ ವೈದ್ಯರನ್ನು ಕರೆಸಿ ಎಂಡೋಸ್ಕೋಪಿ ಮೂಲಕವೇ ಬ್ರಶ್ ಹೊರ ತೆಗೆಯಲಾಯ್ತು. ಬ್ರಶ್ ತೆಗೆಯೋದು ಸ್ವಲ್ಪ ತಡವಾಗಿದ್ದರೂ, ನಾಳಗಳ ಕಟ್ ಆಗುವ ಸಾಧ್ಯತೆ ಹೆಚ್ಚಿತ್ತು ಎಂದು ಏಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Advertisement
ದೇಹದೊಳಗೆ ಬ್ರಶ್ ಸೇರಿದ್ದೇಗೆ?
ಆಸ್ಪತ್ರೆಗೆ ದಾಖಲಾದ ಯುವಕರಿಬ್ಬರು ಅಜೀರ್ಣತೆಯಿಂದ ಬಳಲುತ್ತಿದ್ದರು. ಇವರ ತಂದೆ ಹಲ್ಲುಜ್ಜುವಾಗ ಬ್ರಶ್ ಗಂಟಲಿನವರೆಗೂ ತೆಗೆದುಕೊಂಡು ಹೋಗಿ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಿ ಅಂತ ಸಲಹೆ ನೀಡಿದ್ದರು. ಆದ್ರೆ ಯುವಕರಿಬ್ಬರು ಗಂಟಲಿನೊಳಗೆಯೇ ಬ್ರಶ್ ಹಾಕಿಕೊಂಡು ಎಡವಟ್ಟು ಮಾಡಿಕೊಂಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv