ಕೋಲಾರ: ಟೊಮೆಟೋ (Tomato) ಬೆಳೆದ ಜಿಲ್ಲೆಯ ಕುಟುಂಬವೊಂದು ಒಂದೇ ದಿನ ಲಕ್ಷಗಟ್ಟಲೇ ಹಣವನ್ನು ಸಂಪಾದಿಸಿದೆ. ಎರಡು ಸಾವಿರ ಬಾಕ್ಸ್ ಟೊಮೆಟೋವನ್ನು ಹರಾಜು ಹಾಕಿ ಜಿಲ್ಲೆಯ ಕುಟುಂಬವೊಂದು 38 ಲಕ್ಷ ರೂ. ಆದಾಯ ಸಂಪಾದಿಸಿದೆ.
ಬೇತಮಗಲದ ಪ್ರಭಾಕರ್ ಗುಪ್ತಾ ಮತ್ತು ಅವರ ಸಹೋದರರು ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ (Kolara APMC Market) ಬಾಕ್ಸ್‌ಗೆ 1,900 ರೂ.ನಂತೆ ಮಾರಾಟ ಮಾಡಿದ್ದಾರೆ.
Advertisement
ಕೆಜಿಎಫ್ (KGF) ತಾಲೂಕಿನ ಜಯಮಂಗಲ, ಬಡಮಕಾನಹಳ್ಳಿ, ಬೇತಮಂಗಲ ಸುತ್ತಮುತ್ತ 40 ಎಕರೆ ಜಮೀನನ್ನು ಹೊಂದಿರುವ ಗುಪ್ತಾ ಕುಟುಂಬ ಕಳೆದ ಹಲವು ವರ್ಷಗಳಿಂದ ಹಣ್ಣು, ಹೂ, ತರಕಾರಿ ಕೃಷಿ ಮಾಡುತ್ತಿದೆ. ಇವರು ಮೂಲತಃ ರಸಗೊಬ್ಬರ ಮತ್ತು ಕೀಟನಾಶಕಗಳ ವ್ಯಾಪಾರಿಗಳಾಗಿದ್ದು, ಕೃಷಿ ಹಾಗೂ ಕೃಷಿಯಲ್ಲಿ ಅಪಾರ ಪರಿಣಿತಿ ಹೊಂದಿದ್ದಾರೆ. ಎರಡು ವರ್ಷಗಳ ಹಿಂದೆಯೂ ಟೊಮೆಟೋಗೆ ಉತ್ತಮ ಬೆಲೆ ಸಿಕ್ಕಿತ್ತು ಎಂದು ಗುಪ್ತಾ ಕುಟುಂಬಸ್ಥರು ಹೇಳುತ್ತಾರೆ. ಇದನ್ನೂ ಓದಿ: ಆಂಧ್ರ, ಕರ್ನಾಟಕ, ಮಹಾರಾಷ್ಟ್ರದಿಂದ ಟೊಮೆಟೋ ಖರೀದಿಗೆ ಕೇಂದ್ರ ಸೂಚನೆ
Advertisement
Advertisement
ಕೋಲಾರದಿಂದ ಪ್ರತಿ ದಿನ 8,000 ಮೆಟ್ರಿಕ್ ಟನ್ ಟೊಮೆಟೋ ಪೂರೈಕೆಯಾಗುತ್ತಿತ್ತು. ಆದರೆ ಈಗ ಕೇವಲ 1,000 ಮೆಟ್ರಿಕ್ ಟೊಮೊಟೋ ಪೂರೈಕೆ ಆಗುತ್ತಿದೆ. ಜಿಲ್ಲೆಯಲ್ಲಿ ಟೊಮೆಟೋ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೋ ಬೆಳೆಯುವ ರೈತರು ಹಗಲಿರುಳು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ.
Advertisement
ಕೋಲಾರ ಎಪಿಎಂಸಿ ಮಾರುಕಟ್ಟೆಯು ದೇಶದಲ್ಲಿ ಟೊಮೆಟೋ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಂದ ಹೊರ ರಾಜ್ಯಗಳು ಸೇರಿದಂತೆ ಬೇರೆ ಬೇರೆ ದೇಶಗಳಿಗೆ ಟೊಮೆಟೋವನ್ನು ಕಳುಹಿಸಿಕೊಡಲಾಗುತ್ತದೆ. ಆದರೆ ಕಳೆದ 15 ದಿನಗಳಿಂದ ಟೊಮೆಟೋ ಬಂಗಾರವಾಗಿದ್ದು ರೈತರು ಜಮೀನಿನಲ್ಲಿ ಕಾಯುತ್ತಿದ್ದರೆ ಇತ್ತ ಮಾರುಕಟ್ಟೆಯಲ್ಲಿ ಸಿಸಿ ಟಿವಿ ಹಾಗೂ ಪೊಲೀಸ್ ಕಣ್ಗಾವಲನ್ನು ಇರಿಸಲಾಗಿದೆ.
ರಾಜ್ಯದಲ್ಲೇ ಅತಿ ಹೆಚ್ಚು ಟೊಮೆಟೋವನ್ನು ಕೋಲಾರದ ರೈತರು ಬೆಳೆಯುತ್ತಾರೆ. ಅದರಲ್ಲೂ ಉತ್ತಮ ಗುಣಮಟ್ಟದ ಟೊಮೆಟೋ ಬೆಳೆದರೂ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈಗ ಹಲವು ಮಾರಕ ಕಾಯಿಲೆಗಳು ಬಂದ ಹಿನ್ನೆಲೆ ಟೊಮೆಟೋ ಇಳುವರಿ ಕಡಿಮೆಯಾಗಿದ್ದು ಬೆಲೆ ಭಾರೀ ಏರಿಕೆಯಾಗಿದೆ.
Web Stories