– 15 ಕೆಜಿ ಬಾಕ್ಸ್ 1500 ರೂ.ಗೆ ಹರಾಜು
ಕೋಲಾರ: ಟೊಮೆಟೋ ಬೆಳೆ (Tomato Price) ಕೋಲಾರ (Kolar) ಜಿಲ್ಲೆಯ ರೈತರ ಪಾಲಿಗೆ ಜೂಜಾಟದ ಬೆಳೆಯಾಗಿ ಪರಿಣಮಿಸಿದೆ. ಯಾಕಂದ್ರೆ ಬೆಳೆ ಇದ್ದರೆ ಬೆಲೆ ಇರಲ್ಲ, ಬೆಲೆ ಇದ್ದಾಗ ಬೆಳೆ ಬರಲ್ಲ ಇದು ಟೊಮೆಟೋ ಬೆಳೆಗಾರರ ಸ್ಥಿತಿ. ಟೊಮೆಟೋಗೆ ಇಂದು ಸಿಕ್ಕ ಬೆಲೆ ನಾಳೆ ಸಿಗಲ್ಲ, ಇದು ರೈತರ ಪರಿಸ್ಥಿತಿಯಾದ್ರೆ ಗ್ರಾಹಕರಂತೂ ಫುಲ್ ಖುಷಿಯಾಗಿದ್ದಾರೆ.
Advertisement
ಕಳೆದ ಮೂರು ದಿನಗಳಲ್ಲಿ 900 ರಿಂದ 1000 ರೂಪಾಯಿವರೆಗೆ ಇಳಿಕೆಯಾಗುವ ಮೂಲಕ ರೈತರಲ್ಲಿ ಆತಂಕ ಉಂಟಾಗಿದ್ರೆ, ಗ್ರಾಹಕರು ಕೊಂಚ ನಿರಾಳರಾಗಿದ್ದಾರೆ. ಕಳೆದ 2 ತಿಂಗಳಿನಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಭಾರೀ ಬೆಲೆಯಲ್ಲಿ ಹರಾಜಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬೆಲೆ ಕುಸಿಯುವ ಮೂಲಕ ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರಾಸರಿ 15 ಕೆಜಿಯ ಟೊಮೆಟೋ ಬಾಕ್ಸ್ ಬೆಲೆ ಕೇವಲ 1,500 ರೂಪಾಯಿಗೆ ಅಂದ್ರೆ ಅತಿ ಹೆಚ್ಚು ಗುಣಮಟ್ಟ ಇರುವ ಟೊಮೆಟೋ ಬಿಕರಿಯಾಗಿದೆ. ಆ ಮೂಲಕ ಟೊಮೆಟೋ ಬೆಳೆ ನಿನ್ನೆ-ಮೊನ್ನೆ ಬೆಲೆಗೆ ಹೋಲಿಕೆ ಮಾಡಿದ್ರೆ 900 ರಿಂದ 1000 ರೂಪಾಯಿ ಕಡಿಮೆಯಾಗಿದೆ. ಸದ್ಯ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಟೊಮೆಟೋ ಬರುತ್ತಿದ್ದು, ಬೆಲೆ ಇಳಿಮುಖವಾಗುತ್ತಿದೆ.
Advertisement
Advertisement
ಇದಕ್ಕೆ ಕಾರಣ ಟೊಮೆಟೋ ಖರೀದಿಗೆ ಹೊರ ರಾಜ್ಯದ ವ್ಯಾಪಾರಿಗಳು ಮುಂದಾಗುತ್ತಿಲ್ಲ. ಅಲ್ಲದೆ ಏಷ್ಯಾದಲ್ಲೆ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ನಾಸಿಕ್‍ನಲ್ಲೂ ಟೊಮೆಟೋ ಹೆಚ್ಚಾಗಿ ಆವಕ ಬಂದಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಅಲ್ಲಿನ ವ್ಯಾಪಾರಿಗಳು ಟೊಮೆಟೋ ಖರೀದಿ ಮಾಡುತ್ತಿಲ್ಲ. ಪರಿಣಾಮ ಟೊಮೆಟೋ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಇವೆಲ್ಲದರ ಮಧ್ಯೆ ಕೋಲಾರ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಟೊಮ್ಯಾಟೊ ಬೆಳೆಯಲು ಮುಂದಾಗಿದ್ದಾರೆ.
Advertisement
ಒಟ್ಟಿನಲ್ಲಿ ಟೊಮೆಟೋ ಬೆಲೆ ಕಡಿಮೆಯಾಗಿರುವುದು ಗ್ರಾಹಕರಲ್ಲಿ ಸಂತಸ ಮನೆ ಮಾಡಿದ್ದರೆ, ರೈತರು ಇರೋ ಬೆಲೆಯೇ ಇರಲಿ ಅಂತಿದ್ದಾರೆ.
Web Stories