ಬೆಂಗಳೂರು: ಭಾರೀ ಮಳೆಯಿಂದಾಗಿ ಅಪಾರ ಬೆಳೆ ನಾಶವಾಗಿದ್ದು, ಟೊಮೆಟೋ ಬೆಲೆ ದಿಢೀರನೇ ಗಗನಕ್ಕೆ ಏರಿದೆ. ಇದರಿಂದಾಗಿ ಜನಸಾಮಾನ್ಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
Advertisement
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಬೆಳೆ ಹಾಳಾಗಿದೆ. ಮಾರುಕಟ್ಟೆಗೆ ತರಕಾರಿಗಳು ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು ಬೇಡಿಕೆ ಜಾಸ್ತಿಯಿದೆ. ಪರಿಣಾಮ ಬೆಲೆ ಭಾರೀ ಏರಿಕೆಯಾಗಿದೆ. ಇದನ್ನೂ ಓದಿ: ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟ್ರಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್
Advertisement
Advertisement
ಬೆಂಗಳೂರಿನ ಮಾರುಕಟ್ಟೆ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕೆಜಿಗಟ್ಟಲೇ ತರಕಾರಿಕೊಳ್ಳಲು ಹೆದರುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಟೊಮೆಟೊ ಬೆಲೆ ದಿನೇ ದಿನೇ ಅಧಿಕಗೊಳ್ಳುತ್ತಿದ್ದು, ಹೀಗೆ ಮುಂದುವರಿದರೆ ಟೊಮೆಟೊವನ್ನು ಕೊಳ್ಳಲು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಬಹುದು. ಇದನ್ನೂ ಓದಿ: ಖ್ಯಾತ ವಿದ್ವಾಂಸ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ವಿಧಿವಶ
Advertisement
ಪ್ರತಿ ಕೆಜಿಗೆ ಟೊಮೆಟೊ ಬೆಲೆ 90-100 ರೂ.ಗಳಾಗಿದ್ದು, ಜನಸಾಮಾನ್ಯರ ಪಾಲಿಗೆ ಇದು ಬಿಸಿತುಪ್ಪದಂತಾಗಿದೆ. ಹಾಪ್ ಕಾಮ್ಸ್‌ನಲ್ಲಿ ಒಂದು ಕೆಜಿ ಟೊಮೆಟೊಗೆ 90 ರೂ.ಯಿದ್ದರೆ, ಆನ್‍ಲೈನ್‍ನಲ್ಲಿ ಖರೀದಿಸುವವರಿಗೆ 98 ರೂಪಾಯಿ ಆಗಿದೆ. ಸೇಬಿಗಿಂತ ಟೊಮೆಟೊಗೆ ಅಧಿಕ ಬೆಲೆ ಬಂದಿದೆ.
1 ಕೆಜಿಗೆ ಎಷ್ಟು ದರ?
ತೊಗರಿ 70 ರೂ., ಅಡುಗೆ ಬಾಳೆ 40 ರೂ., ಅವರೇಕಾಯಿ 59 ರೂ., ಅವರೇಬೇಳೆ 280 ರೂ., ಅವರೇಬೀಜ 135 ರೂ., ಬ್ರಾಕಲಿ 250 ರೂ., ಕೊತ್ತಂಬರಿ ಸೊಪ್ಪು 108 ರೂ. ಕರಿಬೇವು 67 ರೂ. ಇದೆ.