ವಿಜಯನಗರ: ಜಿಲ್ಲೆಯಲ್ಲಿ (Vijayanagara ) ಟೊಮ್ಯಾಟೋ ಬೆಲೆ (Tomato Price) ಏಕಾಏಕಿ ಪಾತಾಳಕ್ಕೆ ಕುಸಿದಿದೆ. 1000-1200 ರೂ. ಇದ್ದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 100-80 ರೂ.ಗೆ ಕುಸಿದಿದೆ. ಬೆಲೆ ಕುಸಿತದಿಂದ ರೈತರು ಹಾಗೂ ಮಾರಾಟಗಾರರು ನಷ್ಟ ಅನುಭವಿಸುತ್ತಿದ್ದಾರೆ.
ವ್ಯಾಪಾರಿಗಳು 20 ರೂ.ಗೆ 2 ರಿಂದ 4 ಕೆಜಿ ಟೊಮ್ಯಾಟೋವನ್ನು ಮಾರಾಟ ಮಾಡುತ್ತಿದ್ದಾರೆ. ಏಕಾಏಕಿ ಟೊಮ್ಯಾಟೋ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸಾಲ ಮಾಡಿ ಟೊಮ್ಯಾಟೋ ಬೆಳೆದು ಮಾರುಕಟ್ಟೆಗೆ ತರೋ ರೈತರ (Farmers) ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಇದನ್ನೂ ಓದಿ: ಇರಾನ್ ನಮಗೆ ದೊಡ್ಡ ಗಿಫ್ಟ್ ಕೊಟ್ಟಿದೆ: ಹಾರ್ಮುಜ್ ಓಪನ್ ಬಗ್ಗೆ ಟ್ರಂಪ್ ಸುಳಿವು
ಇರಾನ್ – ಇಸ್ರೇಲ್ ಯುದ್ಧದಿಂದ ಬೇರೆ ದೇಶಗಳಿಗೆ ಟೊಮ್ಯಾಟೋ ರಫ್ತಾಗುತ್ತಿಲ್ಲ. ಅಲ್ಲದೇ ಸಿಲಿಂಡರ್ ಸಿಗದೇ ಹೋಟೆಲ್‍ಗಳು ಸರಿಯಾಗಿ ನಡೆಯದ ಹಿನ್ನೆಲೆ ಟೊಮ್ಯಾಟೋ ವ್ಯಾಪಾರ ಕುಸಿದಿದೆ. ಇದೇ ಕಾರಣಕ್ಕೆ ಟೊಮ್ಯಾಟೋ ಬೆಲೆ ಸಹ ಕುಸಿದಿದೆ. ಇದನ್ನೂ ಓದಿ: ಕೊಲ್ಲಿ ಯುದ್ಧದ ಮಧ್ಯೆ ಕರ್ನಾಟಕದಲ್ಲಿ ತೈಲಾತಂಕ – ಡ್ರಮ್, ಕ್ಯಾನ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಂಡ ಜನ

