ಬೆಂಗಳೂರು/ಚಾಮರಾಜನಗರ: ಮೊನ್ನೆ ಮೊನ್ನೆಯಷ್ಟೇ ಡಬಲ್ ಸೆಂಚುರಿ ದಾಟಿದ್ದ ಟೊಮೆಟೋ ಬೆಲೆ ಇದೀಗ 250ರ ಗಡಿ ದಾಟಿದೆ.
ಸದ್ಯಕ್ಕೆ ಈ ಓಟ ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಹೋಲ್‍ಸೇಲ್ ಮಾರುಕಟ್ಟೆ ಪರಿಣಿತರ ಪ್ರಕಾರ ಟೊಮೆಟೋ ಬೆಲೆ ಶೀಘ್ರವೇ ಮುನ್ನೂರರ ಗಡಿಯನ್ನು ದಾಟಲಿದೆ. ಇದಕ್ಕೆ ಮಳೆ, ಟೊಮೆಟೋ ಗುಣಮಟ್ಟ, ಪೂರೈಕೆ ಮತ್ತು ಸಾಗಣೆ ಸಮಸ್ಯೆಗಳು ಕಾರಣ ಎನ್ನಲಾಗುತ್ತಿದೆ.
Advertisement
Advertisement
ಈ ಮಧ್ಯೆ ಚಾಮರಾಜನಗರದ ಕೆಬ್ಬೆಪುರದಲ್ಲಿ ಮಂಜು ಎನ್ನುವ ರೈತ ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೋ ಗಿಡಗಳನ್ನು ಕಿಡಿಗೇಡಿಗಳು ಬುಡಸಮೇತ ಕತ್ತರಿಸಿ ಹಾಕಿದ್ದಾರೆ. ಟೊಮೆಟೋ ಕೊಯ್ಲಿಗೆ ಬಂದ ಸಂದರ್ಭದಲ್ಲಿ ದುಷ್ಕರ್ಮಿಗಳು ನಡೆಸಿದ ಕೃತ್ಯದಿಂದ ರೈತ ಮಂಜು ಕಂಗಾಲಾಗಿದ್ದಾರೆ. ಹೊಲದಲ್ಲಿ ಬಿದ್ದು ಹೊರಳಾಡಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಭ್ರಷ್ಟರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಶಾಕ್- ಬೆಂಗಳೂರಿನ 45 ಕಡೆ ಏಕಕಾಲದಲ್ಲಿ ದಾಳಿ
Advertisement
Advertisement
ಬೇಗೂರು ಪೊಲೀಸರು ಶ್ವಾನಪಡೆಯೊಂದಿಗೆ ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.
Web Stories