ಕೊರೊನಾ ಲಾಕ್‍ಡೌನ್‍ನಿಂದಾಗಿ ಎಲ್ಲರೂ ಮನೆಯಲ್ಲಿದ್ದೀರಿ, ಹೀಗಾಗಿ ಮನೆಯವರಿಗೆ, ಮಕ್ಕಳಿಗೆ ವಿಧ-ವಿಧವಾದ ಅಡುಗೆ ಮಾಡಿಕೊಡಿ. ಸಾಮಾನ್ಯವಾಗಿ ಪಲ್ಯ, ಗೊಜ್ಜು ಮಾಡಿದರೆ ಒಂದು ದಿನದಲ್ಲೇ ಹಾಳಾಗುತ್ತದೆ. ಆದರೆ ನಾವು ಹೇಳಿಕೊಡು ಟೊಮೆಟೊ ಗೊಜ್ಜು ಮಾಡಿದ್ರೆ, ಅದನ್ನು ಒಂದು ತಿಂಗಳು ಇಟ್ಟುಕೊಂಡು ತಿನ್ನಬಹುದು. ಸುಲಭವಾಗಿ ಟೊಮೆಟೋ ಗೊಜ್ಜು ಮಾಡುವ ವಿಧಾನ ಇಲ್ಲಿದೆ….
ಬೇಕಾಗುವ ಸಾಮಗ್ರಿಗಳು
1. ಟೊಮೆಟೊ – 8 ರಿಂದ 10
2. ಬ್ಯಾಡಗಿ ಮೆಣಸಿನಕಾಯಿ – 10
3. ಸಾಸಿವೆ – 1 ಟೀ ಸ್ಪೂನ್
4. ಜೀರಿಗೆ – 1 ಟಿ ಸ್ಪೂನ್
5. ದನಿಯಾ – 1 ಟೀ ಸ್ಪೂನ್
6. ಮೆಂತೆ – 1/2 ಟೀ ಸ್ಪೂನ್
7. ಇಂಗು – 1/2 ಟೀ ಸ್ಪೂನ್
8. ಅರಿಶಿಣ – ಚಿಟಿಕೆ
9. ಉಪ್ಪು – ರುಚಿಗೆ ತಕ್ಕಷ್ಟು
10. ಎಣ್ಣೆ – ಒಗ್ಗರಣೆಗೆ
11. ಬೆಳ್ಳುಳ್ಳಿ – 7-8
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಒಂದು ದೊಡ್ಡ ಬೌಲ್‍ನಲ್ಲಿ ಎಲ್ಲ ಟೊಮೆಟೊಗಳನ್ನು ಹಾಕಿ 5 ನಿಮಿಷ ಕುದಿಸಿಕೊಳ್ಳಬೇಕು. (ಟೊಮಾಟೊ ಕಟ್ ಮಾಡಬಾರದು)
* ಒಂದು ಪ್ಯಾನ್ ಸ್ಟೌವ್ ಮೇಲಿಟ್ಟುಕೊಂಡು 1/2 ಟೀ ಸ್ಪೂನ್ ಜೀರಿಗೆ, ದನಿಯಾ, ಮೆಂತೆ ಹಾಕಿ ಹುರಿದುಕೊಂಡು ಕುಟಾಣಿಯಲ್ಲಿ ಪುಡಿ ಮಾಡಿ ಮಾಡಿಕೊಳ್ಳಬೇಕು.
* ಅದೇ ಪ್ಯಾನ್ ನಲ್ಲಿ ಬ್ಯಾಡಗಿ ಮೆಣಸಿನಕಾಯಿಗಳನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
* ಕುದಿಸಿಕೊಂಡಿದ್ದ ಟೊಮೆಟೊಗಳ ಮೇಲಿನ ಸಿಪ್ಪೆ ತೆಗೆದು ಮಿಕ್ಸಿ ಜಾರಿಗೆ ಹಾಕಿ. ಅದೇ ಜಾರಿಗೆ ಹುರಿದುಕೊಂಡಿರುವ ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಒಗ್ಗರಣೆಗೆ ಎಣ್ಣೆ ಹಾಕಿಕೊಳ್ಳಿ. (ಸ್ಟೌವ್ ಸಣ್ಣ ಉರಿಯಲ್ಲಿರಬೇಕು).
Advertisement
* ಎಣ್ಣೆ ಬಿಸಿಯಾಗ್ತಿದ್ದಂತೆ ಸಾಸಿವೆ, ಜೀರಿಗೆ, ಇಂಗು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ.
* ಸಾಸಿವೆ ಚಿಟಪಟ ಅನ್ನುತ್ತಿದ್ದಂತೆ ಕರಿಬೇವು ಹಾಕಿ. ರುಬ್ಬಿಕೊಂಡಿದ್ದ ಟೊಮೆಟೊ ಮಿಶ್ರಣ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಕೊನೆಗೆ ರುಚಿಗೆ ತಕ್ಕಷ್ಟು, ಚಿಟಿಕೆ ಅರಿಶಿಣ ಮತ್ತು ಕುಟಾಣಿಯಲ್ಲಿ ಪುಡಿ ಮಾಡಿದ್ದ ಮಸಲಾ ಹಾಕಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿದರೆ ಟೊಮೆಟೊ ಗೊಜ್ಜು ರೆಡಿ.