ಸರಳವಾಗಿ ಮತ್ತು ತಕ್ಷಣವೇ ಮಾಡಬಹುದಾದಂತಹ ವಿಶಿಷ್ಟ ಅಡುಗೆಯ ಶೈಲಿಯಲ್ಲಿ ಟೊಮೆಟೊ ಗೊಜ್ಜು ಒಂದಾಗಿದೆ. ಟೊಮೆಟೊದಿಂದ ಹಲವಾರು ಅಡುಗೆಯನ್ನು ಮಾಡಬಹುದು. ವಿಶಿಷ್ಟವಾದ ಮತ್ತು ಹೆಚ್ಚು ರುಚಿಕರವಾದ ಟೊಮೆಟೊ ಗೊಜ್ಜನ್ನು ಮಾಡುವುದು ತುಂಬಾ ಸರಳವಾಗಿರುತ್ತದೆ. ಆದ್ದರಿಂದ ನಿಮಗಾಗಿ ಟೊಮೆಟೊ ಗೊಜ್ಜು ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
1. ಟೊಮೆಟೊ – 2
2. ಈರುಳ್ಳಿ – 1
3. ಜೀರಿಗೆ, ಸಾಸಿವೆ- 1 ಚಮಚ
4. ಅಡುಗೆ ಎಣ್ಣೆ – 3 ಚಮಚ
5. ಮೆಣಸಿನ ಕಾಯಿ -2
6. ಉಪ್ಪು – ರುಚಿಗೆ ತಕ್ಕಷ್ಟು
7. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ – 1 ಚಮಚ
8. ತೆಂಗಿನ ಕಾಯಿ ತುರಿ – ಒಂದು ಸಣ್ಣ ಬೌಲ್
9. ಗಸಗಸೆ – ಅರ್ಧ ಚಮಚ
10. ಕೊತ್ತಂಬರಿ ಸೊಪ್ಪು -ಸ್ವಲ್ಪ
Advertisement
Advertisement
ಮಾಡುವ ವಿಧಾನ
* ಗಸಗಸೆಯ ಜೊತೆಗೆ ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
* ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಕಾದ ಮೇಲೆ ಎಣ್ಣೆ ಹಾಕಿ, ನಂತರ ಅದಕ್ಕೆ ಜೀರಿಗೆ ಮತ್ತು ಸಾಸಿವೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
* ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಜೊತೆಗೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಮೆಣಸಿನ ಕಾಯಿಯನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.
* ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಟೊಮೆಟೊ ಜೊತೆ ರುಬ್ಬಿಕೊಂಡ ಕಾಯಿತುರಿ ಮಿಶ್ರಣ, ಸ್ವಲ್ಪ ನೀರು ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಾಣಲೆಗೆ ಪ್ಲೇಟ್ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ.
* 15 ನಿಮಿಷಗಳ ನಂತರ ಆ ಪ್ಲೇಟನ್ನು ತೆಗೆದು ಅದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಟೊಮೆಟೊ ಗೊಜ್ಜು ಸವಿಯಲು ಸಿದ್ಧ.
* ಟೊಮೆಟೊ ಗೊಜ್ಜನ್ನು ನೀರು ದೋಸೆ, ಅನ್ನ ಮತ್ತು ಚಪಾತಿಯ ಜೊತೆ ಸೇವಿಸಬಹುದಾಗಿದೆ.