CinemaLatestMain PostSouth cinema

ಕನ್ನಡದಲ್ಲಿ ಚಿತ್ರ ರಿಲೀಸ್ ಮಾಡಲ್ಲ ಅಂದಿದ್ದಕ್ಕೆ ನಟ ನಾನಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್

ಟಾಲಿವುಡ್ ಸ್ಟಾರ್ ನಟ ನಾನಿ `ಶ್ಯಾಮ್ ಸಿಂಗ್ ರಾಯ್’ ಚಿತ್ರದ ನಂತರ ಪ್ಯಾನ್ ಇಂಡಿಯಾ ಸಿನಿಮಾ `ಅಂತೇ ಸುಂದರಾನಿಕಿ’ ಚಿತ್ರದ ಮೂಲಕ ಬರುತ್ತಿದ್ದಾರೆ. ಇತ್ತೀಚಿಗಷ್ಟೇ ಚಿತ್ರದ ಟೀಸರ್ ರಿಲೀಸ್ ವೇಳೆಯಲ್ಲಿ ಚಿತ್ರವನ್ನ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂದಿರೋದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ನೆಟ್ಟಿಗರು ನಾನಿ ವಿರುದ್ಧ ಫುಲ್‌ ಗರಂ ಆಗಿದ್ದಾರೆ.

ನಾನಿ ನಟನೆಯ ಮುಂದಿನ ಚಿತ್ರ `ಅಂತೇ ಸುಂದರಾನಿಕಿ’ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆದರೆ ನಟ ನಾನಿ ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡಲ್ಲ ಅಂದಿರೋದು ಸಿನಿಅಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ. ಆದರೆ ಅದಕ್ಕೆ ಸೂಕ್ತ ಕಾರಣ ಕೂಡ ಕೊಟ್ಟಿದ್ದಾರೆ.

ಇತ್ತೀಚಿಗೆ ತೆರೆಕಂಡ `ಆರ್‌ಆರ್‌ಆರ್’ ಚಿತ್ರ ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಯಾ ರಾಜ್ಯದಲ್ಲಿ ಅಲ್ಲಿನ ಭಾಷೆಯಲ್ಲೇ ರಿಲೀಸ್ ಆಗಿತ್ತು. ಕರ್ನಾಟಕದಲ್ಲೂ ಹೆಸರಿಗಷ್ಟೇ ಕೆಲವೊಂದು ಥಿಯೇಟರ್‌ನಲ್ಲಿ ಕನ್ನಡದಲ್ಲಿ ರಿಲೀಸ್ ಆಗಿದ್ರೆ ಬಹುತೇಕ ಚಿತ್ರಮಂದಿರದಲ್ಲಿ ತೆಲುಗಿನಲ್ಲೇ ರಿಲೀಸ್ ಆಗಿತ್ತು. ಇದೀಗ `ಅಂತೇ ಸುಂದರಾನಿಕಿ’ ಚಿತ್ರ ಪ್ಯಾನ್ ಇಂಡಿಯಾ ಚಿತ್ರ ಆಗಿರೋದರಿಂದ ಬೇರೆ ಭಾಷೆಗಳಲ್ಲಿ ಆಗ್ತಿರುವಾಗ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂದರೋದು ನೆಟ್ಟಿಗರನ್ನ ಕೆರಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ನಟ ನಾನಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ `ಅಂತೇ ಸುಂದರಾನಿಕಿ’ ಚಿತ್ರವನ್ನ ಕನ್ನಡದಲ್ಲಿ ಯಾಕೆ ರಿಲೀಸ್ ಮಾಡಲ್ಲ ಎಂಬುದಕ್ಕೆ ನಾನಿ ಸೂಕ್ತ ಕಾರಣ ಕೊಟ್ಟಿದ್ದಾರೆ. ಕರ್ನಾಟಕದಲ್ಲೂ ಬಹುತೇಕ ಮಂದಿ ತೆಲುಗು ಬಲ್ಲವರೇ ಇದ್ದಾರೆ. ಅಲ್ಲಿ ಕನ್ನಡ ಡಬ್ಬಿಂಗ್ ಅವಶ್ಯಕತೆಯಿಲ್ಲ. ಇವರೆಗೂ ತೆಲುಗು ಭಾಷೆಯ ಚಿತ್ರವನ್ನ ನೋಡಿ ಬೆಂಬಲಿಸಿದ್ದಾರೆ ಹಾಗಾಗಿ ನಮ್ಮ ಸಿನಿಮಾವನ್ನ ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂತಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಟೆನ್ನಿಸ್ ತಾರೆ ಮರಿಯಾ ಶರಪೋವಾರ ಬೇಬಿ ಬಂಪ್ ಫೋಟೋ ವೈರಲ್

ನಾನಿ, ತಮ್ಮ ಸಿನಿಮಾವನ್ನ ಕನ್ನಡದಲ್ಲಿ ಡಬ್ ಮಾಡೋದಿಲ್ಲ ಅಂತಾ ಹೇಳಿರೋದಕ್ಕೆ ವಿರೋಧ ವ್ಯಕ್ತವಾಗಿದೆ. ಕನ್ನಡದಲ್ಲಿ ಡಬ್ ಮಾಡಿ ರಿಲೀಸ್ ಮಾಡೋವರೆಗೂ ನಾವು ಚಿತ್ರವನ್ನ ನೋಡೋದಿಲ್ಲ ಅಂತಾ ನಾನಿ ವಿರುದ್ಧ ಕಿಡಿಕಾರಿದ್ದಾರೆ. `ಅಂತೇ ಸುಂದರಾನಿಕಿ’ ಚಿತ್ರದಲ್ಲಿ ನಾನಿಗೆ ಜೋಡಿಯಾಗಿ ನಜ್ರಿಯಾ ನಟಿಸಿದ್ದಾರೆ. ಇದೇ ಜೂನ್ 10ಕ್ಕೆ ಚಿತ್ರ ತೆರೆಗೆ ಅಬ್ಬರಿಸಲಿದೆ. ಪ್ರೇಕ್ಷಕಪ್ರಭುಗಳು ಸಿನಿಮಾ ನೋಡಿ ಬೆಂಬಲ ಸೂಚಿಸ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

Leave a Reply

Your email address will not be published.

Back to top button