ತೆಲುಗು ಚಿತ್ರರಂಗದಲ್ಲಿ ನಟ, ನಿರ್ಮಾಪಕನಾಗಿ ಛಾಪೂ ಮೂಡಿಸಿರುವ ರೆಬೆಲ್ ಸ್ಟಾರ್ ಕೃಷ್ಣಂರಾಜು(Krishnam Raju) ಇನ್ನಿಲ್ಲ. ಹೈದರಾಬಾದ್‌ನ ಭಾನುವಾರ ಬೆಳಗ್ಗೆ 3.25ಕ್ಕೆ ಕೊನೆಯುಸಿರೆಳೆದಿದ್ದಾರೆ. ʻಬಾಹುಬಲಿʼ ಸ್ಟಾರ್ ಪ್ರಭಾಸ್ (Bahubali Star Prabhas) ಅವರ ದೊಡ್ಡಪ್ಪ ಕೃಷ್ಣಂರಾಜು ಅವರು 83ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ್ದಾರೆ.
ಟಾಲಿವುಡ್ ಚಿತ್ರರಂಗದಲ್ಲಿ 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೃಷ್ಣಂರಾಜು( Krishnam Raju) ನಟಿಸಿದ್ದಾರೆ. ನಿರ್ಮಾಪಕನಾಗಿ ಕೂಡ ಚಿತ್ರರಂಗದಲ್ಲಿ ಗೆದ್ದಿದ್ದಾರೆ. ಇನ್ನೂ ನಟ ಕೃಷ್ಣಂರಾಜು ಅನಾರೋಗ್ಯದಿಂದ ಬಳಲುತ್ತಿದ್ದರು ಅವರು ಕೆಲ ಸಮಯದಿಂದ ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣಂರಾಜು ನಿಧನರಾಗಿದ್ದಾರೆ. ಇದನ್ನೂ ಓದಿ:ಎಷ್ಟೇ ಚೆನ್ನಾಗಿದ್ರೂ ಯಾವ ಹುಡುಗರು ನನ್ನ ಮಾತಾಡಿಸುವುದೇ ಇಲ್ಲ: ಜಯಶ್ರೀ ಬೇಸರ
ಇನ್ನೂ ಪ್ರಭಾಸ್ ದೊಡ್ಡಪ್ಪ ಕೃಷ್ಣಂರಾಜು ಅವರು ಕಡೆಯದಾಗಿ `ರಾಧೆ ಶ್ಯಾಮ್’ (Radhe Shyam) ಚಿತ್ರದಲ್ಲಿ ನಟಿಸಿದ್ದರು. ರಾಜಕೀಯ ರಂಗದಲ್ಲೂ ಸಕ್ರೀಯರಾಗಿದ್ದ ಕೃಷ್ಣಂರಾಜು ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇನ್ನು ಹಿರಿಯ ನಟ ಕೃಷ್ಣಂರಾಜು ಅವರ ನಿಧನಕ್ಕೆ ಹಿತೈಷಿಗಳು, ಗಣ್ಯರು, ಇಡೀ ತೆಲುಗು ಚಿತ್ರರಂಗ ಸಂತಾಪ ಸೂಚಿಸಿದ್ದಾರೆ.