ಟಾಲಿವುಡ್ (Tollywood) ನಟ ನಿತಿನ್ (Nithin) ಅವರು ರಾಜಕೀಯ (Politics) ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ನಟನೆಗೆ ಸದ್ಯ ಬೈ ಹೇಳುತ್ತಾ ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Vidhanasabha Election) ತೆಲುಗಿನ ಹೀರೋ ನಿತಿನ್ ಎಂಟ್ರಿ ಕೊಡ್ತಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಲು ನಟ ಹೊಸ ಹೆಜ್ಜೆ ಇಟ್ಟಿದ್ದಾರೆ.
Advertisement
ಬಣ್ಣದ ಬದುಕಿಗೂ ರಾಜಕೀಯಕ್ಕೂ ಅನಾದಿಕಾಲದಿಂದ ನಂಟಿದೆ. ಈಗಾಗಲೇ ಚಿರಂಜೀವಿ, ಮೋಹನ್ ಬಾಬು, ಪವನ್ ಕಲ್ಯಾಣ್ (Pawan Kalyan) ಅವರು ರಾಜಕೀಯ ರಂಗದಲ್ಲಿ ಹೈಲೆಟ್ ಆಗಿದ್ದರು. ಇದೀಗ ಅದೇ ಹಾದಿಯಲ್ಲಿ ತೆಲುಗಿನ ಸೂಪರ್ ಹೀರೋ ನಿತಿನ್ ರಾಜಕೀಯಕ್ಕೆ ಬರುತ್ತಿದ್ದಾರೆ. ಸಿನಿಮಾರಂಗದಲ್ಲಿ ತಮಗೆ ಡಿಮ್ಯಾಂಡ್ ಇರುವಾಗಲೇ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ:ಇಷ್ಟದ ಹುಡುಗಿಯನ್ನ ಮೆಚ್ಚಿಸಲು ಸಿಂಗರ್ ಹನುಮಂತ ಸರ್ಪ್ರೈಸ್
Advertisement
Advertisement
ಸದ್ಯದಲ್ಲೇ ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ವರ್ಷಾಂತ್ಯಕ್ಕೆ ನಡೆಯಲಿರೋ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿತಿನ್ ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕದವನ್ನು ನಿತಿನ್ ತಟ್ಟಿದ್ದಾರೆ ಎನ್ನಲಾಗಿದೆ. ನಿಜಾಮಾಬಾದ್ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ನಿತಿನ್ ಬೇಡಿಕೆ ಇಟ್ಟಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಮೂಲಗಳು ತಿಳಿಸಿವೆ.
Advertisement
ನಟ ನಿತಿನ್ ಕುಟುಂಬಸ್ಥರು ಹಲವು ವರ್ಷಗಳಿಂದ ಕಾಂಗ್ರೆಸ್‌ನೊಂದಿದೆ ಗುರುತಿಸಿಕೊಂಡಿದ್ದಾರೆ. ಇವರದ್ದು ಸಿನಿಮಾ, ರಾಜಕೀಯ ಎರಡು ರಂಗಗಳಲ್ಲೂ ತೊಡಗಿಸಿಕೊಂಡ ಕುಟುಂಬ. ಹೀಗಾಗಿ ಮೊದಲಿನಿಂದಲೂ ರಾಜಕೀಯಕ್ಕೆ ಬರಬೇಕು ಎಂಬ ಒತ್ತಡವಿದ್ದರೂ ನಿತಿನ್ ಮನಸ್ಸು ಮಾಡಿರಲಿಲ್ಲ. ಈಗ ರಾಜಕೀಯಕ್ಕೆ ಬರಲು ನಿತಿನ್ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಡ್ಡಾದಲ್ಲಿ ಅನೇಕರ ಚರ್ಚೆಗೆ ಗ್ರಾಸವಾಗಿದೆ.
ನಟ ನಿತಿನ್, ಭೀಷ್ಮ, ರಂಗದೇ, ಹೀರೋ, ಜಯಂ, ದ್ರೋಣ, ರಾಮ್, ಅಖಿಲ್ ಸೇರಿದಂತೆ ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಕಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ರಾಜಕೀಯಕ್ಕೆ ಬರುವ ಕಾರಣ, ಬಣ್ಣದ ಲೋಕಕ್ಕೆ ಶಾಶ್ವತವಾಗಿ ಗುಡ್ ಬೈ ಹೇಳ್ತಾರಾ ಕಾದುನೋಡಬೇಕಿದೆ.