ಕನ್ನಡದ ‘ಹೆಡ್‌ಬುಷ್’ (Headbush) ನಟಿ ಪಾಯಲ್ ರಜಪೂತ್ (Payal Rajput) ಆಗಾಗ ಬೋಲ್ಡ್ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಒಳ ಉಡುಪು ಧರಿಸದೇ ಸಖತ್ ಸೆಕ್ಸಿಯಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಹಾಟ್ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಹಸಿರು ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಗಿಳಿ ಹಸಿರು ಬಣ್ಣದ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ಒಳ ಉಡುಪು ಧರಿಸದೇ ಕೊಂಚ ಎದೆ ಭಾಗ ಕಾಣುವಂತೆ ಸಖತ್ ಹಾಟ್ ಆಗಿ ಕ್ಯಾಮೆರಾಗೆ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಆ್ಯಕ್ಷನ್ ಸೀನ್ ವೇಳೆ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ
ಇತ್ತೀಚೆಗೆ ಚಿತ್ರವೊಂದರ ನಿರ್ಮಾಪಕರ ಬಗ್ಗೆ ಪಾಯಲ್ ಆರೋಪಿಸಿದ್ದರು. ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ಸಂಭಾವನೆ ನೀಡಿಲ್ಲ. ಆದರೂ ಸಿನಿಮಾ ಪ್ರಚಾರ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ನಟಿ ಪಾಯಲ್ ನಿರ್ಮಾಪಕರ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು.
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ನನ್ನ ಬಳಿ ‘ರಕ್ಷಣ’ ಎಂಬ ಸಿನಿಮಾವಿದೆ. ಇದನ್ನು 2019 ಮತ್ತು 2020ರಲ್ಲಿ ಚಿತ್ರೀಕರಿಸಲಾಗಿದೆ. ಇದನ್ನು ಮೂಲತಃ 5Ws ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು. ಆದರೆ ಇತ್ತೀಚೆಗೆ ನನಗೆ ಸಿಕ್ಕ ಯಶಸ್ಸು ನೋಡಿ ಈಗ ನಿರ್ಮಾಪಕರು ಆ ಚಿತ್ರವನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ನನ್ನ ಬಾಕಿ ಹಣಗಳನ್ನು ಕ್ಲೀಯರ್ ಮಾಡದೇ ಪ್ರಚಾರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ತಿಳಿಸಿದ್ದರು ಪಾಯಲ್.
ಚಿತ್ರದ ಪ್ರಚಾರಕ್ಕೆ ಬರದೇ ಇದ್ದರೆ ತೆಲುಗು ಉದ್ಯಮದಿಂದ ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನನ್ನ ತಂಡ ಬಾಕಿ ಮೊತ್ತದ ಬಗ್ಗೆ ಚರ್ಚಿಸಿದಾಗ ರಾಜಿ ಮಾಡಿಕೊಳ್ಳಲು ನಿರಾಕರಿಸಿದರು. ನನ್ನ ಹೆಸರನ್ನು ಡ್ಯಾಮೇಜ್ ಆಗುವಂತೆ ಬಳಸಲಾಗುತ್ತಿದೆ. ಇತ್ತೀಚಿನ ಮೀಟಿಂಗ್‌ನಲ್ಲಿ ನನ್ನ ಬಗ್ಗೆ ಅಸಭ್ಯ ಭಾಷೆ ಬಳಸಲಾಗಿದೆ. ನನಗೆ ನೀಡಬೇಕಾದ ಸಂಪೂರ್ಣ ಸಂಭಾವನೆಯನ್ನು ನೀಡದೆ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಿದ್ದಕ್ಕಾಗಿ ನಾನು ಈಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ಪಾಯಲ್ ಆಕ್ರೋಶ ಹೊರಹಾಕಿದ್ದರು.
ಅಂದಹಾಗೆ, ‘ಆರ್‌ಎಕ್ಸ್ 100’ (Rx 100 Film) ಸಿನಿಮಾದ ಮೂಲಕ ಟಾಲಿವುಡ್‌ಗೆ ನಟಿ ಎಂಟ್ರಿ ಕೊಟ್ಟರು. ಬಳಿಕ ಮಂಗಳವಾರಂ, ವೆಂಕಿ ಮಾಮ, ಡಿಸ್ಕೋ ರಾಜಾ, ಟೀಸ್ ಮಾರ್ ಖಾನ್, ಕನ್ನಡದ ಹೆಡ್‌ಬುಷ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.