ಕನ್ನಡತಿ ಅನುಷ್ಕಾ ಶೆಟ್ಟಿ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಸಿನಿಮಾಗಳಲ್ಲಿ ಯಶಸ್ಸು ಕಂಡಿರುವ ನಟಿ ಅದ್ಯಾವ ಮದುವೆ ಆಗುತ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ಅನುಷ್ಕಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವರ್ಷ ಹಸೆಮಣೆ ಏರೋದಕ್ಕೆ ಸ್ವೀಟಿ ಸಜ್ಜಾಗಿದ್ದಾರೆ.
Advertisement
ಅರುಂಧತಿ, ಮಿರ್ಚಿ, ಬಾಹುಬಲಿ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಅನುಷ್ಕಾ ಈಗ ವೃತ್ತಿರಂಗದಲ್ಲಿ ಅದ್ಯಾಕೋ ಸೈಲೆಂಟ್ ಆಗಿದ್ದಾರೆ. ಸಿನಿಮಾ ವಿಚಾರದಲ್ಲಿ ಸೆಲೆಕ್ಟೀವ್ ಆಗಿದ್ದಾರೆ. ಸದ್ಯ ನವೀನ್ ಪೋಲಿ ಶೆಟ್ಟಿ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಚಿತ್ರರಂಗಕ್ಕೆ ಬಂದು 17 ವರ್ಷ ಆಗಿರುವ ಖುಷಿಯಲ್ಲಿ ಹೊಸ ಸಿನಿಮಾದ ಸೆಟ್ನಲ್ಲಿ ಕೇಕ್ ಮಾಡಿ, ಸಂಭ್ರಮಿಸಿದ್ದರು. ಈಗ ಹಸೆಮಣೆ ಏರುವ ವಿಚಾರವಾಗಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ
Advertisement
Advertisement
ಅನುಷ್ಕಾಗೆ 40 ವರ್ಷ ಸಮೀಪಿಸುತ್ತಿರುವ ವೇಳೆಯಲ್ಲಿ, ಖ್ಯಾತ ಜ್ಯೋತಿಷಿ ಮದುವೆ ಬಗ್ಗೆ ಕುತೂಹಲಕಾರಿ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯದ ಪ್ರಕಾರ ಅನುಷ್ಕಾ ಅವರು ಚಿತ್ರರಂಗದ ವ್ಯಕ್ತಿಯನ್ನು ಮದುವೆಯಾಗಿಲ್ಲ ಎಂದಿದ್ದಾರೆ. ಸಿನಿಮಾ ಇಂಡಸ್ಟ್ರಿಗೆ ಸಂಬಂಧವೇ ಇಲ್ಲದವರನ್ನು ಅನುಷ್ಕಾ ಮದುವೆಯಾಗುವುದು ಖಂಡಿತ ಎಂದಿದ್ದಾರೆ. 2023ರ ಮೊದಲು ಅನುಷ್ಕಾ ಮದುವೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಅನುಷ್ಕಾ ಬೆಂಗಳೂರಿನ ಕೈಗಾರಿಕೋದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರಂತೆ. ಗುರು ಹಿರಿಯರು ನಿಗದಿಪಡಿಸಿದ ವರನನ್ನೇ ಅನುಷ್ಕಾ ಮದುವೆ ಆಗೋದು ಖಚಿತವಂತೆ.
Advertisement
ಮುಂದಿನ ದಿನಗಳಲ್ಲಿ ಅನುಷ್ಕಾ ಮದುವೆ ವಿಚಾರ ನಿಜವಾಗುತ್ತಾ ಅಂತಾ ಅನುಷ್ಕಾ ಕುಟುಂಬದಿಂದ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]