ಮೃಣಾಲ್ ಬ್ಯೂಟಿ ಬಗ್ಗೆ ಬಣ್ಣಿಸಿದ ವಿಜಯ್ ದೇವರಕೊಂಡ

Public TV
1 Min Read
mrunal thakur

ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Devarakonda) ಸದ್ಯ ‘ಫ್ಯಾಮಿಲಿ ಸ್ಟಾರ್’ (Family Star) ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ವಿಜಯ್, ಸಹನಟಿ ಮೃಣಾಲ್ ತುಟಿ, ಕಣ್ಣು ಮತ್ತು ಮೂಗಿನ ಬಗ್ಗೆ ಬಣ್ಣಿಸಿದ್ದಾರೆ. ‘ಸೀತಾರಾಮಂ’ ನಟಿಯ ಸೌಂದರ್ಯಕ್ಕೆ ಫಿದಾ ಆಗಿರೋದಾಗಿ ವಿಜಯ್ ಹೇಳಿದ್ದಾರೆ.

vijay devarakondaಮೃಣಾಲ್‌ಗೆ ಚಿಕ್ಕ ವಯಸ್ಸಿನಿಂದಲೂ ನಟನೆ ಎಂದರೆ ತುಂಬಾ ಇಷ್ಟ. ಭಾಷೆ ತಿಳಿಯದಿದ್ದರೂ ಅದನ್ನು ಅರಿತು ಚೆನ್ನಾಗಿ ನಟಿಸುತ್ತಾರೆ. ಅದು ನನಗೆ ಹಲವು ಬಾರಿ ಅಚ್ಚರಿ ಮೂಡಿಸಿದೆ ಎಂದು ಮೃಣಾಲ್ ಬಗ್ಗೆ ವಿಜಯ್ ಹೇಳಿದ್ದಾರೆ. ಬಳಿಕ ನಿರ್ದೇಶಕರು ಏನೇ ಹೇಳಿದ್ದರು ಅದನ್ನು ಅರ್ಥ ಮಾಡಿಕೊಂಡು ನಟಿಸುವ ಸಾಮಾರ್ಥ್ಯ ಅವರಿಗಿದೆ. ಬ್ಯೂಟಿ ಅವರಿಗೆ ದೇವರು ಕೊಟ್ಟ ಕೊಡುಗೆ. ಮೃಣಾಲ್ ಕಣ್ಣು, ಮೂಗು, ತುಟಿ ಎಲ್ಲವೂ ಅವರಿಲ್ಲಿರುವ ಅದ್ಭುತ ಎಂದು ‘ಫ್ಯಾಮಿಲಿ ಸ್ಟಾರ್’ ನಾಯಕಿಯ ಬಗ್ಗೆ ವಿಜಯ್ ದೇವರಕೊಂಡ ಕೊಂಡಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ (Rashmika Mandanna) ಕಥೆಯೇನು? ಎಂದು ವಿಜಯ್‌ಗೆ ನೆಟ್ಟಿಗರು ಕಾಲೆಳೆದಿದ್ದಾರೆ.

mrunal

ಶೂಟಿಂಗ್ ಸಂದರ್ಭದಲ್ಲಿ ನಿರ್ದೇಶಕ ಪರಶುರಾಮ್ ಮತ್ತು ಮೃಣಾಲ್ ಠಾಕೂರ್ (Mrunal Thakur) ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ವಿಜಯ್ ಮಾತನಾಡಿದ್ದಾರೆ. ಇದನ್ನೂ ಓದಿ:ಹಿಟ್ ಚಿತ್ರ ರಿಜೆಕ್ಟ್ ಮಾಡಿ ಟ್ರೋಲ್‌ನಿಂದ ಬಚಾವ್ ಆದ ಶ್ರೀಲೀಲಾ

‘ಫ್ಯಾಮಿಲಿ ಸ್ಟಾರ್’ ಸಿನಿಮಾ ಏಪ್ರಿಲ್ 5ರಂದು ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಮತ್ತು ಮೃಣಾಲ್ ಜೋಡಿ ಚಿತ್ರಮಂದಿರದಲ್ಲಿ ಮೋಡಿ ಮಾಡುತ್ತಾ ಎಂದು ಕಾಯಬೇಕಿದೆ.

Share This Article