ಟಾಲಿವುಡ್ ನಟರಾದ ವೆಂಕಟೇಶ್, ರಾಣಾ ದಗ್ಗುಬಾಟಿಗೆ (Rana Daggubati) ಸಂಕಷ್ಟ ಎದುರಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ ಆದೇಶ ಮೀರಿ ಡೆಕ್ಕನ್ ಕಿಚನ್ ಹೋಟೆಲ್ ನೆಲಸಮ ಮಾಡಿದ್ದಕ್ಕೆ ವೆಂಕಟೇಶ್ ಮತ್ತು ರಾಣಾ ಮೇಲೆ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ರಮ್ಯಾಗೆ ಮದುವೆಯ ಆಮಂತ್ರಣ ನೀಡಿದ ಡಾಲಿ
ಆಸ್ತಿ ವಿವಾದ ಪ್ರಕರಣದಲ್ಲಿ ಹೈದರಾಬಾದ್‌ನ ಫಿಲ್ಮ್ ಸಿಟಿಯಲ್ಲಿನ ಡೆಕ್ಕನ್ ಕಿಚನ್ ಹೋಟೆಲ್‌ಗೆ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿತ್ತು. ಹೀಗಿದ್ದರೂ ಕೂಡ ಹೋಟೆಲ್ ಅನ್ನು ನೆಲಸಮ ಮಾಡಿದ ಹಿನ್ನೆಲೆ ನಟ ವೆಂಕಟೇಶ್ (Venkatesh) ಎ1, ರಾಣಾ ದಗ್ಗುಬಾಟಿ ಎ2, ಅಭಿರಾಮ್ ದಗ್ಗುಬಾಟಿ ಎ3, ಸುರೇಶ್ ಬಾಬು ಎ4 ಆರೋಪಿಗಳು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ನಂದಕುಮಾರ್ ದೂರಿನನ್ವಯ ವೆಂಕಟೇಶ್, ರಾಣಾ ದಗ್ಗುಬಾಟಿ ಮೇಲೆ ಫಿಲ್ಮ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಣಾ ಕುಟುಂಬ ಮತ್ತು ನಂದಕುಮಾರ್ ಎಂಬವರ ಮಧ್ಯೆ ಈ ಹೋಟೆಲ್ ವಿಚಾರವಾಗಿ ವಿವಾದವಿತ್ತು. ಈ ಬಗ್ಗೆ ನಾಂಪಲ್ಲಿಯ ಸಿಟಿ ಕೋರ್ಟ್‌ಗೆ ನಂದಕುಮಾರ್ ಮೊರೆ ಹೋಗಿದ್ದರು. ಈ ಹಿನ್ನೆಲೆ ಡೆಕ್ಕನ್ ಕಿಚನ್‌ಗೆ ತಡೆಯಾಜ್ಞೆ ನೀಡಲಾಗಿತ್ತು. ಕೋರ್ಟ್ ಆದೇಶವನ್ನು ಲೆಕ್ಕಿಸದೇ ಹೋಟೆಲ್ ಅನ್ನು ತೆರವು ಮಾಡಲಾಗಿದೆ.