ಟಾಲಿವುಡ್‌ನಲ್ಲಿ (Tollywood) ಸಾಕಷ್ಟು ಸಮಯದಿಂದ ವರುಣ್ ತೇಜ್ -ಲಾವಣ್ಯ ತ್ರಿಪಾಠಿ (Lavanya Tripati) ಡೇಟಿಂಗ್ ಸುದ್ದಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇತ್ತೀಚಿಗೆ ಈ ಜೋಡಿಯ ಮದುವೆಯ ಬಗ್ಗೆ ಸಖತ್ ಸುದ್ದಿಯಾಗಿತ್ತು. ಈ ವರ್ಷ ಹಸೆಮಣೆ (Wedding) ಏರಲಿದ್ದಾರೆ ಎಂದೇ ನ್ಯೂಸ್ ಆಗಿತ್ತು. ಅದಕ್ಕೆಲ್ಲಾ ಈಗ ನಟಿ ಲಾವಣ್ಯ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟ್ರೆಡಿಷನಲ್ ಫೋಟೋಶೂಟ್‌ನಲ್ಲಿ ಮಿಂಚಿದ ಸೋನಂ ಕಪೂರ್
ತೆರೆಯ ಮೇಲೆ ವರುಣ್- ಲಾವಣ್ಯ ಜೋಡಿಯ ಕೆಮಿಸ್ಟ್ರಿ ಕಮಾಲ್ ಮಾಡಿದೆ. `ಮಿನಿಸ್ಟರ್’, ಮತ್ತು `ರಾಯಭಾರಿ’ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಎಲ್ಲೂ ಅಧಿಕೃತವಾಗಿ ಈ ಜೋಡಿ ಸ್ಪಷ್ಟನೆ ನೀಡಿಲ್ಲ. ಇತ್ತೀಚಿಗಷ್ಟೇ ತೆಲುಗಿನ ಹಿರಿಯ ನಟ ನಾಗ ಬಾಬು (Actor Naga Babu) ಅವರು ಮಗ ವರುಣ್ ಮದುವೆ ಬಗ್ಗೆ ಸದ್ಯದಲ್ಲೇ ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳಿದರು.
ಹಾಗಾಗಿ ವರುಣ್ ತೇಜ್ ಜೊತೆಗಿನ ಲಾವಣ್ಯ ಮದುವೆ ಎಂದು ಸುದ್ದಿ ಸದ್ದು ಮಾಡಿತ್ತು. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆಗಬೇಕು ಎಂಬುದು ನನ್ನ ಭಾವನೆ. ಮದುವೆ ಆಗುವ ಕಾಲಕ್ಕೆ ಆಗುತ್ತದೆ. ಹೀಗೆಯೇ ಮದುವೆ ಆಗಬೇಕು ಎಂದು ಕನಸು ಕಂಡವಳು ನಾನಲ್ಲ ಎಂದಿದ್ದಾರೆ ಲಾವಣ್ಯ.
ಪ್ರಸ್ತುತ್ತ ನನ್ನ ಜೀವನದಲ್ಲಿ ಸಿನಿಮಾಗಳಲ್ಲಿ ನಟಿಸುವುದೇ ಮುಖ್ಯ. ಸಿನಿಮಾ ಬಿಟ್ಟು ಮದುವೆ ಬಗ್ಗೆ ನಾನು ಆಲೋಚನೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಈ ಮೂಲಕ ವರುಣ್ ತೇಜ್ ಜೊತೆಗಿನ ಮದುವೆ ಬಗ್ಗೆ ನಟಿ ಬ್ರೇಕ್ ಹಾಕಿದ್ದಾರೆ.