ಅದ್ದೂರಿಯಾಗಿ ನಡೆಯಿತು ವರುಣ್- ಲಾವಣ್ಯ ಪ್ರೀ ವೆಡ್ಡಿಂಗ್‌ ಪಾರ್ಟಿ

Public TV
1 Min Read
varun tej 2

ಟಾಲಿವುಡ್‌ನ (Tollywood) ಲವ್ ಬರ್ಡ್ಸ್ ವರುಣ್ ತೇಜ್- ಲಾವಣ್ಯ (Lavanya Tripathi) ಜೋಡಿ, ನ.1ರಂದು ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ಸಜ್ಜಾಗಿದ್ದಾರೆ. ಹಸೆಮಣೆ ಏರುವ ಮುನ್ನ ಇದೀಗ ಹೊಸ ಜೋಡಿ ಇಟಲಿಯಲ್ಲಿ ಅ.30ರಂದು ಕಾಕ್‌ಟೇಲ್ ಪಾರ್ಟಿ ಮಾಡಿದೆ. ನವಜೋಡಿ ವರುಣ್- ಲಾವಣ್ಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ರಾಜ್ಯೋತ್ಸವ ಪ್ರಶಸ್ತಿ: ಸಿನಿಮಾ ಕ್ಷೇತ್ರದಿಂದ ಯಾರಿಗೆಲ್ಲ ಅವಾರ್ಡ್

varun tej 1

ಬಿಳಿ ಬಣ್ಣದ ಉಡುಗೆಯಲ್ಲಿ ವರುಣ್- ಲಾವಣ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್- ಸಾಯಿ ಧರಂ ತೇಜ್ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ಬಿಳಿ ಬಣ್ಣದ ಧಿರಿಸಿನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದು (ಅ.31ರಂದು) ನವ ಜೋಡಿಯ ಹಳದಿ ಶಾಸ್ತ್ರ, ಮೆಹೆಂದಿ ಶಾಸ್ತ್ರ ನಡೆಯಲಿದೆ. ವರುಣ್ (Varun Tej) ಮದುವೆಯಲ್ಲಿ ಇಡೀ ಮೆಗಾಸ್ಟಾರ್ ಕುಟುಂಬ ಭಾಗಿಯಾಗಲಿದೆ.

‘ಮಿಸ್ಟರ್’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, ಹಲವು ವರ್ಷಗಳ ಡೇಟಿಂಗ್ ನಂತರ ಈ ವರ್ಷ ಜೂನ್ 9ರಂದು ಕುಟುಂಬಸ್ಥರ ಸಮ್ಮುಖದಲ್ಲಿ ನಾಗಬಾಬು ಪುತ್ರ ವರುಣ್‌-ಲಾವಣ್ಯ ಎಂಗೇಜ್‌ಮೆಂಟ್ ಗ್ರ್ಯಾಂಡ್‌ ಆಗಿ ನೆರವೇರಿತ್ತು.

ಮೊದಲ ಪ್ರೇಮ ನಿವೇದನೆ ಮಾಡಿದ ಸ್ಥಳದಲ್ಲಿಯೇ ಮದುವೆಯಾಗಬೇಕು ಎಂಬ ಮನದಾಸೆಯಂತೆಯೇ ಈಗ ಇಟಲಿಯಲ್ಲಿ ಅದ್ದೂರಿಯಾಗಿ ವರುಣ್- ಲಾವಣ್ಯ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article