ಹೈದರಾಬಾದ್: ರಸ್ತೆ ಅಪಘಾತದಿಂದ ಕೋಮಾದಲ್ಲಿದ್ದ ತೆಲುಗು ನಟ ಸಾಯಿಧರ್ಮ ತೇಜ್ ಚೇತರಿಸಿಕೊಂಡಿದ್ದು, ಅಭಿಮಾನಿಗಳಿಗೆ ಥಂಬ್ ಮಾಡಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
Thanks is a small word to express my gratitude for your love and affection on me and my movie “Republic “
See you soon pic.twitter.com/0PvIyovZn3
— Sai Dharam Tej (@IamSaiDharamTej) October 3, 2021
ನನ್ನ ಮೇಲೆ ಮತ್ತು ನನ್ನ ಸಿನಿಮಾ ರಿಪಬ್ಲಿಕ್ ಮೇಲೆ ನೀವು ತೋರಿಸಿದ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಧನ್ಯವಾದ ಎಂಬುದು ಸಣ್ಣ ಪದವಾಗಿದೆ. ಶೀಘ್ರದಲ್ಲೇ ನಿಮ್ಮನ್ನು ನೋಡುತ್ತೇನೆ ಎಂದು ಬರೆದುಕೊಂಡು ಥಂಬ್ ಮಾಡಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ಆಕ್ಸಿಡೆಂಟ್ – ಟಾಲಿವುಡ್ ನಟ ಸಾಯಿಧರ್ಮ ತೇಜ್ ಸ್ಥಿತಿ ಗಂಭೀರ
View this post on Instagram
ಹೈದರಾಬಾದ್‍ನಲ್ಲಿ ಸೆ.10ರಂದು ಸ್ಪೋಟ್ರ್ಸ್ ಬೈಕ್‍ನಲ್ಲಿ ಚಲಿಸುತ್ತಿದ್ದ ವೇಳೆ ರಾತ್ರಿ 8:30ರ ಸುಮಾರಿಗೆ ತೇಜ್ ಹೈದ್ರಾಬಾದ್‍ನ ಮಾದಾಪುರ ಕೇಬಲ್ ಬ್ರಿಡ್ಜ್ ಅವರು ಅಪಘಾತಕ್ಕೆ ಒಳಗಾದ ಬಳಿಕ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅವರ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಅಭಿಮಾನಿಗಳು ಅಪ್‍ಡೇಟ್ ಕೇಳುತ್ತಿದ್ದರು. ಆ ಕುರಿತು ಈಗ ಸಾಯಿಧರ್ಮ ಅವರೇ ಉತ್ತರ ನೀಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಒಂದನ್ನು ಮಾಡಿದ್ದಾರೆ.