ರವಿತೇಜಗೆ ಶ್ರೀಲೀಲಾ ಹೀರೋಯಿನ್- ಹೊಸ ಚಿತ್ರಕ್ಕೆ ಅದ್ಧೂರಿ ಚಾಲನೆ

Public TV
1 Min Read
sreeleela

ನ್ನಡದ ನಟಿ ಶ್ರೀಲೀಲಾ (Sreeleela) ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಗ್ಯಾಪ್‌ನ ನಂತರ ಮತ್ತೆ ನಟಿಸಲು ‘ಕಿಸ್‌’ ನಟಿ ಸಜ್ಜಾಗಿದ್ದಾರೆ. ಇದೀಗ ರವಿತೇಜ (Ravi Teja) ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿದ್ದಾರೆ. ಈಗ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮುಹೂರ್ತ ಕಾರ್ಯಕ್ರಮ ಜರುಗಿದೆ.

sreeleela 1 2

‘ಧಮಾಕ’ ನಂತರ ಮತ್ತೆ ಸ್ಟಾರ್ ನಟ ರವಿತೇಜಗೆ ಶ್ರೀಲೀಲಾ ಜೋಡಿಯಾಗಿದ್ದಾರೆ. ಮತ್ತೊಂದು ಹೊಸ ಪ್ರೇಮಕಥೆಯಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಸ್ಕ್ರಿಪ್ಟ್ ಪೂಜೆ ಮಾಡುವ ಮೂಲಕ ಸಿನಿಮಾಗೆ ರವಿತೇಜ ಟೀಮ್ ಚಾಲನೆ ನೀಡಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ರವಿತೇಜ ಜೊತೆ ಶ್ರೀಲೀಲಾ ಕೂಡ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಯಾರು?

sreeleela 2

ಜೂನ್ 11ರಿಂದಲೇ ರವಿತೇಜ 75ನೇ (Raviteja 75th) ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಆಗಲಿದೆ.

ಅಂದಹಾಗೆ, ತೆಲುಗಿನ ರವಿತೇಜ ಪ್ರಾಜೆಕ್ಟ್ ಜೊತೆಗೆ ಬಾಲಿವುಡ್‌ಗೂ ನಟಿ ಎಂಟ್ರಿ ಕೊಡ್ತಿದ್ದಾರೆ. ಸೈಫ್ ಅಲಿ ಖಾನ್ ಪುತ್ರನಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ.

Share This Article