ಸಾಯಿ ಪಲ್ಲವಿ ನಟನೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ತೆಲುಗು ನಟ

Public TV
1 Min Read
nikhil siddarth

ಸೌತ್ ಸುಂದರಿ ಸಾಯಿ ಪಲ್ಲವಿ (Sai Pallavi) ನಟನೆಗೆ ಮತ್ತು ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ನ್ಯಾಚುರಲ್ ನಟನೆಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಹೀಗಿರುವಾಗ ಸಹಜ ನಟಿ ಸಾಯಿ ಪಲ್ಲವಿ ನಟನೆ ಬಗ್ಗೆ ತೆಲುಗು ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

sai pallavi 1

ಇತ್ತೀಚೆಗೆ ಸಿನಿಮಾವೊಂದರ ಸಂದರ್ಶನದಲ್ಲಿ ನಿಖಿಲ್‌ಗೆ ಪ್ರಶ್ನೆಯೊಂದು ಎದುರಾಗಿದೆ. ಯಾವ ನಟಿಯ ನಟನೆ ನೋಡಿ ನೀವು ಕಣ್ಣೀರು ಹಾಕಿದ್ರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಥಟ್ ಅಂತ ಸಾಯಿ ಪಲ್ಲವಿ ಹೆಸರನ್ನು ನಟ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:ಸೀರೆಯಲ್ಲಿ ಸಖತ್ತಾಗಿ ಕಂಡ ನಟಿ ಪ್ರಿಯಾಮಣಿ

sai pallavi 3‘ವಿರಾಟ ಪರ್ವಂ’ (Viraat Parvam) ಸಿನಿಮಾದಲ್ಲಿ ಸಾಯಿ ಪಲ್ಲವಿ ನಟನೆ ನೋಡಿ ನಾನು ಕಣ್ಣೀರು ಹಾಕಿದ್ದೆ ಎಂದು ರಿವೀಲ್ ಮಾಡಿದ್ದಾರೆ. ಬಳಿಕ ಆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಟಿಯ ಸಾವಿನ ದೃಶ್ಯ ಕಣ್ಣೀರು ತರಿಸಿತ್ತು. ಇದರ ಬಗ್ಗೆ ಸಾಯಿ ಪಲ್ಲವಿ ಜೊತೆ ಕೂಡ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.

ಅಂದಹಾಗೆ, ಸದ್ಯ ಸಾಯಿ ಪಲ್ಲವಿ ಅವರು ಬಾಲಿವುಡ್‌ಗೆ ಹಾರಿದ್ದಾರೆ. ಆಮೀರ್ ಖಾನ್ ಪುತ್ರನಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆ ನಾಗಚೈತನ್ಯ ಹೊಸ ಚಿತ್ರಕ್ಕೆ ನಟಿ ಹೀರೋಯಿನ್ ಆಗಿದ್ದಾರೆ.

Share This Article