ಟಾಲಿವುಡ್ (Tollywood) ಅಂಗಳದ ಯಂಗ್ ಹೀರೋ ನಾಗಚೈತನ್ಯ ಹೊಸ ಮನೆ ಖರೀದಿಸಿದ್ದಾರೆ. ಯುಗಾದಿ ಹಬ್ಬ ಬುಧವಾರದಂದು (ಮಾ.22) ಹೊಸ ಮನೆಗೆ (House Warming) ಕಾಲಿಟ್ಟಿದ್ದಾರೆ.
ಸೌತ್ ನಟಿ ಸಮಂತಾ (Samantha) ಅವರನ್ನು ಪ್ರೀತಿಸಿ ನಾಗಚೈತನ್ಯ ಮದುವೆಯಾಗಿದ್ದರು. 2021ರಲ್ಲಿ ಡಿವೋರ್ಸ್ ಆಗಿರುವ ವಿಚಾರ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸ್ಯಾಮ್ ಜೊತೆಗಿನ ಸಂಬಂಧಕ್ಕೆ ಬ್ರೇಕ್ ಹಾಕಿದ ಮೇಲೆ ಹೆಚ್ಚಾಗಿ ಹೋಟೆಗಳಲ್ಲಿ ಉಳಿಯುತ್ತಿದ್ದರು.
ಇತ್ತೀಚಿಗೆ ನಟ ನಾಗಚೈತನ್ಯ ಹೊಸ ಮನೆ ಖರೀದಿಸಿದ್ದಾರೆ. ನಾಗಚೈತನ್ಯ ಕುಟುಂಬಸ್ಥರು ಆಪ್ತರು ಅಷ್ಟೇ ಈ ಶುಭಕಾರ್ಯದಲ್ಲಿ ಭಾಗಿಯಾಗಿದ್ದರು. ಹೈದರಾಬಾದ್‌ನಲ್ಲಿ ತಂದೆ ನಾಗಾರ್ಜುನ (Nagarjuna) ಅವರ ಮನೆಯ ಸಮೀಪವೇ ಹೊಸ ಮನೆಯನ್ನ ತನ್ನ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡಿಸಿದ್ದಾರೆ.
ಇನ್ನೂ ನಾಗಚೈತನ್ಯ ಹೊಸ ಮನೆಯ ಶುಭ ಕಾರ್ಯಕ್ಕೆ ಹೊರಗಿನವರನ್ನು ಕರೆದಿರಲಿಲ್ಲ. ಆದರೆ ಮುಖ್ಯ ಅತಿಥಿಯಾಗಿ `ಪ್ರೇಮಂ’ ನಿರ್ದೇಶಕ ಚಂದು ಮೊಂಡೇಟಿ ಭಾಗಿಯಾಗಿ ಶುಭಹಾರೈಸಿದ್ದರು.