ದುಬಾರಿ ಕಾರು ಖರೀದಿಸಿದ ತೆಲುಗು ನಟ ನಾಗಚೈತನ್ಯ

Public TV
1 Min Read
nagachaitanya

ತೆಲುಗು ನಟ ನಾಗಚೈತನ್ಯ (Nagachaitanya) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿರುವ ನಾಗಚೈತನ್ಯ ಈಗ ದುಬಾರಿ ಕಾರೊಂದನ್ನು ಖರೀದಿಸಿದ್ದಾರೆ. ಇದನ್ನೂ ಓದಿ:ಶ್ರೀವಲ್ಲಿ ಫ್ಯಾನ್ಸ್‌ಗೆ ಸಿಹಿಸುದ್ದಿ- ‘ಪುಷ್ಪ 2’ ಅಪ್‌ಡೇಟ್ ಹಂಚಿಕೊಂಡ ರಶ್ಮಿಕಾ ಮಂದಣ್ಣ

nagachaitanya

ಸದ್ಯ ನಾಗಚೈತನ್ಯ ಅವರು ಚೆನ್ನೈನಲ್ಲಿ ಪೋರ್ಷಾ 911 ಜಿಟಿ3 ಆರ್‌ಎಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಫೋರ್ಷಾ 911 ಜಿಟಿ3 ಆರ್‌ಎಸ್ ಕಾರಿನ ಎಕ್ಸ್ ಶೋರೂಂ ಬೆಲೆ 3.5 ಕೋಟಿ ರೂ. ಮೌಲ್ಯದಾಗಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್ ಲಭ್ಯವಿದೆ. ಈ ಕಾರು ಪ್ರತಿ ಲೀಟರ್‌ಗೆ 7.4 ಕಿಮೀ ಮೈಲೇಜ್ ನೀಡಲಿದೆ. ಸದ್ಯ ಕಾರು ಖರೀದಿಸಿರುವ ಖುಷಿಯಲ್ಲಿರುವ ನಟನಿಗೆ ಇದೀಗ ಫ್ಯಾನ್ಸ್ ವಿಶ್ ಮಾಡಿದ್ದಾರೆ.

ಸದ್ಯ ನಾಗಚೈತನ್ಯ ‘ತಾಂಡೇಲ್’ (Thandel) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ (Sai Pallavi) ನಾಯಕಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪೂಜಾ ಹೆಗ್ಡೆ ಜೊತೆ ಹೊಸ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

Share This Article