ಸ್ಟಾರ್ ನಟ ರಾಮ್ ಪೋತಿನೇನಿ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ತಮ್ಮ ಮದುವೆಯ ಕುರಿತು ಆಗಿತ್ತಿರುವ ಚರ್ಚೆಗೆ ಸ್ಮಾರ್ಟ್ ಆಗಿ ಉತ್ತರಿಸಿದ್ದಾರೆ. ಅಷ್ಟಕ್ಕೂ ನಟ ರಾಮ್ ಹಸೆಮಣೆ ಏರುತ್ತಿರುವುದು ವಿಚಾರ ನಿಜಾನಾ ಎಂಬ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
Advertisement
ಮಸಲಾ, ಶಿವಂ, ಹೈಪರ್,ಇಸ್ಮಾರ್ಟ್ ಶಂಕರ್ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗಮನ ಸೆಳೆದ ನಟ ರಾಮ್ ಪೋತಿನೇನಿ ಮದುವೆಯ ಕುರಿತು ಇತ್ತೀಚೆಗೆ ಸಾಕಷ್ಟು ಸುದ್ದಿಯಾಗಿತ್ತು. ರಾಮ್ ತನ್ನ ಹೈಸ್ಕೂಲ್ ಸ್ನೇಹಿತೆಯ ಜತೆಗೆ ಈ ಸೆಪ್ಟೆಂಬರ್‌ನಲ್ಲಿ ಹಸೆಮಣೆ ಏರುತ್ತಿದ್ದಾರೆ ಎಂದೇ ಸುದ್ದಿಯಾಗಿತ್ತು. ಈಗ ಈ ವದಂತಿಗೂ ನಟ ಟ್ವೀಟ್ ಮೂಲಕ ಉತ್ತರಿಸಿದ್ದಾರೆ. ಇದನ್ನೂ ಓದಿ:ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ
Advertisement
Oh God! Stop! …it’s reached a point wherein I’m having to convince my own family & friends that I’m not getting married to any “secret high school sweetheart”!
TBH,I hardly went to high school..????♂️????
— RAm POthineni (@ramsayz) June 29, 2022
Advertisement
ಓ ದೇವರೇ ನಿಲ್ಲಿಸು, ನಾನು ಯಾವುದೇ ರಹಸ್ಯ ಹೈಸ್ಕೂಲ್ ಪ್ರಿಯತಮೆಯನ್ನು ಮದುವೆಯಾಗುತ್ತಿಲ್ಲ ಎಂದು ನನ್ನ ಸ್ವಂತ ಕುಟುಂಬ ಮತ್ತು ಸ್ನೇಹಿತರಿಗೆ ಮನವರಿಕೆ ಮಾಡುವ ಹಂತಕ್ಕೆ ತಲುಪಿದ್ದೇನೆ. ಹೈಸ್ಕೂಲ್‌ಗೆ ನಾನು ಅಷ್ಟೇನೂ ಹೋಗಿಲ್ಲ ಎಂದು ನಟ ರಾಮ್ ಟ್ವೀಟ್ ಮೂಲಕ ಎಲ್ಲಾ ತಮ್ಮ ಮದುವೆ ವದಂತಿಗಳನ್ನು ತಳ್ಳಿಹಾಕಿದ್ದಾರೆ. ತಾವು ಸದ್ಯ ಮದುವೆಯಾಗುತ್ತಿಲ್ಲ ಎಂದು ನಟ ಸ್ಪಷ್ಟನೆ ನೀಡಿದ್ದಾರೆ.
Advertisement
ಸದ್ಯ `ದಿ ವಾರಿಯರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದು, ರಾಮ್ ಪೋತಿನೇನಿ ಜತೆ ಕೃತಿ ಶೆಟ್ಟಿ, ಆದಿ ಪಿನಿಸೆಟ್ಟಿ ನಟಿಸಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
Live Tv